ಬಸ್‌ಗಾಗಿ ಕಾಯುತ್ತಿದ್ದ  ಬಾಲಕಿಯನ್ನು ಅಪ್ಪಿದ ರಿಕ್ಷಾ ಚಾಲಕ: ಪೋಕ್ಸೋ ಕೇಸು ದಾಖಲು

ಕಾಸರಗೋಡು: ಬಸ್‌ಗಾಗಿ ಕಾಯುತ್ತಿದ್ದ ೧೪ರ ಬಾಲಕಿಯನ್ನು  ಮಾನಭಂಗಪಡಿಸಿದ ದೂರಿನಂತೆ ಆಟೋಚಾಲಕನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಮಾರ್ಚ್ 6ರಂದು ಸಂಜೆ 3.15ರ ವೇಳೆ ವೆಳ್ಳರಿಕುಂಡ್ ಲಿಟ್ಲ್ ಫ್ಲವರ್ ಮಸೀದಿ ಸಮೀಪದಲ್ಲಿ ಘಟನೆ ನಡೆದಿತ್ತು. ಬಾಲಕಿ ಬಸ್‌ಗಾಗಿ ಕಾಯುತ್ತಿದ್ದಳು. ಈ ಸಮಯದಲ್ಲಿ ಹಿಂದಿನಿಂದ ತಲುಪಿದ ಅಕ್ರಮಿ ಬಾಲಕಿಯನ್ನು ಅಪ್ಪಿ ಹಿಡಿದು ಆಕ್ರಮಣ ನಡೆಸಿರುವುದಾಗಿ ದೂರಲಾಗಿತ್ತು. ಘಟನೆ ಬಗ್ಗೆ ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿರುವುದಾಗಿಯೂ ದೂರಲಾಗಿದೆ. ಕಂಡರೆ ಗುರುತು ಹಚ್ಚಬಹುದಾದ ಆಟೋ ಚಾಲಕ ಈ ರೀತಿ ವರ್ತಿಸಿರುವುದಾಗಿ ಬಾಲಕಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಆಟೋ ಚಾಲಕನ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page