ಬಸ್‌ನಲ್ಲಿ ಯುವತಿಗೆ ಲೈಂಗಿಕ ದೌರ್ಜನ್ಯ: ಯುವಕ ಸೆರೆ
ಪಾಲಕ್ಕಾಡ್: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿ ವಿರುದ್ಧ ಲೈಂಗಿಕ ಆಕ್ರಮಣ ನಡೆದ ಬಗ್ಗೆ ದೂರಲಾಗಿದೆ. ಆರೋಪಿಯಾದ ಬ್ಯಾಂಕ್ ನೌಕರನನ್ನು ಕಲ್ಲಡಿಕೋಡ್ ಪೊಲೀಸರು ಬಂಧಿಸಿದ್ದಾರೆ. ಪರಪ್ಪನಂಙಾಡಿ ಎಚ್‌ಡಿಎಫ್‌ಸಿ ಬ್ಯಾಂಕ್ ನೌಕರ ಕಲ್ಲಿಕೋಟೆ ಕಡಲುಂಡಿ ನಿವಾಸಿ ಮೊಹಮ್ಮದ್ ಅಶ್ರಫ್ (39) ಸೆರೆಯಾದ ವ್ಯಕ್ತಿ. ಪಾಲಕ್ಕಾಡ್‌ನಿಂದ ಕಲ್ಲಿಕೋಟೆಗೆ ತೆರಳಿದ ಬಸ್‌ನಲ್ಲಿ ಘಟನೆ ನಡೆದಿದೆ. ಒಪ್ಪಿಗೆ ಕೇಳಿ ಸಮೀಪದಲ್ಲಿ ಕುಳಿತ ಬಳಿಕ ಅಶ್ರಫ್ ದೌರ್ಜನ್ಯ ನಡೆಸಿದ್ದಾನೆನ್ನಲಾಗಿದೆ. ಕಲ್ಲಡಿಕೋಡ್ ಠಾಣೆಗೆ ಬಸ್ ಕೊಂಡುಹೋಗಿ ದೂರು ನೀಡಲಾಗಿತ್ತು.