ಬಸ್‌ನಲ್ಲಿ ಸಾಗಿಸುತ್ತಿದ್ದ ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ
ಕುಂಬಳೆ: ಬಸ್‌ನಲ್ಲಿ ಸಾಗಿಸುತ್ತಿದ್ದ 8.64 ಲೀಟರ್ ಕರ್ನಾಟಕ ಮದ್ಯ ಸಹಿತ ಓರ್ವನನ್ನು ಕುಂಬಳೆ ರೇಂಜ್ ಅಬಕಾರಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಪುತ್ತಿಗೆ ಅಂಗಡಿಮೊಗರು ನಿವಾಸಿ ಸುರೇಶ್ ಎಂ. (43) ಎಂಬಾತ ಬಂಧಿತ ವ್ಯಕ್ತಿಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ಮಧ್ಯಾಹ್ನ 2.15ರ ವೇಳೆ ಬಾಯಾರು ವಿಲ್ಲೇಜ್‌ನ ಬಾಳ್ಯೂರು ಎಂಬಲ್ಲಿ ಅಬಕಾರಿ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದಾಗ ಪೆರ್ಲದಿಂದ ಕುಂಬಳೆಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಮದ್ಯ ಪತ್ತೆಯಾಗಿದೆ. ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಎಕ್ಸೈಸ್ ರೇಂಜ್ ಆಫೀಸ್ ಇನ್ಸ್‌ಪೆಕ್ಟರ್ ಮ್ಯಾಥ್ಯು ಕೆ.ಡಿ, ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಅನೀಶ್ ಕುಮಾರ್ ಎಂ, ಪ್ರಿವೆಂಟಿವ್ ಆಫೀಸರ್‌ಗಳಾದ ಪೀತಾಂಬರನ್, ನಿತೀಶ್, ಸಿಇಒ ಜಿತಿನ್ ವಿ. ಎಂಬವರಿದ್ದರು.