ಬಾಂಗ್ಲಾದ ಯುವತಿಯನ್ನು ಬಳಸಿ ವೇಶ್ಯಾಟಿಕೆ ದಂಧೆ: ಯುವತಿಯರ ಸಹಿತ ಮೂವರ ಬಂಧನ

ಕೊಚ್ಚಿ: ಬಾಂಗ್ಲಾದೇಶದ ಪ್ರಜೆಯಾದ 20ರ ಹರೆಯದ ಯುವತಿಯನ್ನು ಬಳಸಿಕೊಂಡು ವೇಶ್ಯಾಟಿಕೆ ದಂಧೆ ನಡೆಸುತ್ತಿದ್ದ ತಂಡವನ್ನು ಸೆರೆಹಿಡಿಯಲಾಗಿದೆ.  ಕೊಚ್ಚಿ ಸಮೀಪ ಎಳಮಕ್ಕರ ಎಂಬ ಲ್ಲಿ ಕಾರ್ಯಾಚರಿಸುತ್ತಿದ್ದ ವೇಶ್ಯಾಟಿಕೆ ತಂಡ ಸೆರೆಗೀಡಾಗಿದೆ. ತಂಡದಲ್ಲಿ ಮಹಿಳೆಯರು ಒಳಗೊಂ ಡಿದ್ದಾರೆ. ಸೆರೀನ, ಜಗದಿ, ವಿಪಿನ್ ಎಂಬಿವರನ್ನು ಎಳಮಕ್ಕರ ಪೊಲೀಸರು ಬಂಧಿಸಿ ದ್ದಾರೆ. ಯುವತಿಯನ್ನು ಕೊಚ್ಚಿಗೆ ತಲುಪಿಸಿ ಬಳಿಕ ಆಕೆಯನ್ನು ವೇಶ್ಯಾಟಿಕೆ ದಂಧೆಗೆ ಬಳಸಲಾಗಿದೆ ಯೆಂದು ದೂರಲಾಗಿದೆ. ಆರೋಪಿ ಗಳ ಪೈಕಿ ಸೆರೀನ ಈ ದಂಧೆಯ ಸೂತ್ರಧಾರಿಣಿಯಾಗಿದ್ದಾಳೆ. ಯುವತಿಯನ್ನು ಈಕೆ ಕೊಚ್ಚಿಗೆ ತಲುಪಿಸಿರುವುದಾಗಿ ಹೇಳಲಾಗುತ್ತಿದೆ. ಈ ವೇಶ್ಯಾಟಿಕೆ ದಂಧೆ  ವಿವಿಧ ಜಿಲ್ಲೆ ಗಳಲ್ಲೂ  ಕಾರ್ಯಾಚರಿಸುತ್ತಿರುವು ದಾಗಿಯೂ ಅಂದಾಜಿಸಲಾಗಿದೆ. ಹೆತ್ತವರನ್ನು ಕಳೆದುಕೊಂಡ ಯುವತಿ ತನ್ನ 12ರ ಹರೆಯದಲ್ಲಿ ಸಂಬಂಧಿಕ ರೊಂದಿಗೆ ಭಾರತಕ್ಕೆ ಬಂದಿದ್ದಳು.

RELATED NEWS

You cannot copy contents of this page