ಬಾಡಿಗೆ ಮನೆಯಿಂದ ಗಾಂಜಾ ವಶ: ಇಬ್ಬರ ಸೆರೆ
ಮಂಗಳೂರು: ಬಾಡಿಗೆ ಮನೆ ಕೇಂದ್ರೀಕರಿಸಿ ಗಾಂಜಾ ಮಾರಾಟ ನಡೆಸುತ್ತಿದ್ದ ಯುವತಿ ಸಹಿತ ಇಬ್ಬರನ್ನು ಸೆರೆಹಿಡಿಯಲಾಗಿದೆ.
ಮಂಗಳೂರು ಮಾಡೂರಿನ ನಸೀರ್ ಹುಸೈನ್ (50), ಕಿನ್ಯ ರಹ್ಮ ತ್‌ನಗರದ ಅಫ್ಸಾತ್ (37) ಎಂಬಿ ವರು ಬಂಧಿತ ಆರೋಪಿಗಳು. ಮನೆ ಯಿಂದ 2,04,000 ರೂ.ಗಳ ಗಾಂ ಜಾ ವಶಪಡಿಸಲಾಗಿದೆ. ಒಂದು ವಾಹನವನ್ನು ಕಸ್ಟಡಿಗೆ ತೆಗೆಯ ಲಾಗಿದೆ. ಕಿನ್ಯ ರಹ್ಮತ್‌ನಗರದ ಕಜೆ ಬಾಕಿಮಾರ್‌ನ ಬಾಡಿಗೆ ಮನೆಯಿಂದ ಗಾಂಜಾ ವಶಪಡಿಸಲಾಗಿದೆ. ಮಂಗಳೂರು ಸಿಟಿ ಸೌತ್ ಸಬ್ ಡಿವಿಶನ್‌ನ ಮಾದಕದ್ರವ್ಯ ದಳದ ನೇತೃತ್ವದಲ್ಲಿ ಮನೆಗೆ ದಾಳಿ ನಡೆಸಲಾಗಿದೆ.