ಬಾಡೂರು ಸಿಪಿಎಂ ಬ್ರಾಂಚ್ ಸಮ್ಮೇಳನ

ಬಾಡೂರು: ಸಿಪಿಎಂ ಬಾಡೂರು ಬ್ರಾಂಚ್ ಸಮ್ಮೇಳನ ಪಿ.ಟಿ ಅಬ್ದುಲ್ಲ ಹಾಜಿ ನಗರದಲ್ಲಿ ಜರಗಿತು. ಬಿ.ಎಂ. ಹಮೀದ್ ಅಧ್ಯಕ್ಷತೆ ವಹಿಸಿದರು. ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಪಿ. ಅಪ್ಪುಕುಟ್ಟನ್ ಉದ್ಘಾಟಿಸಿದರು. ಬಾಡೂರು ಲೋಕಲ್ ಕಾರ್ಯದರ್ಶಿ ಶಿವಪ್ಪ ರೈ, ಬ್ರಾಂಚ್ ಸೆಕ್ರೆಟರಿ ಕೆ. ನಾರಾಯಣ, ಕುಂಬಳೆ ಏರಿಯಾ ಸಮಿತಿ ಸದಸ್ಯ ಬಶೀರ್ ಅಂಗಡಿಮೊಗರು, ಪಿ.ಬಿ. ಮೊಹಮ್ಮದ್, ಅನಿತ ಎಂ. ಉಪಸ್ಥಿತರಿದ್ದರು. ನೂತನ ಸಮಿತಿ ರೂಪೀಕರಿಸಲಾಯಿತು. ಕಾರ್ಯದರ್ಶಿಯಾಗಿ ಬಿನೀಶ್ ಪಿ. ಆಯ್ಕೆಯಾದರು. ಇದೇ ವೇಳೆ ಉತ್ತಮ ಕೃಷಿಕನಾದ ಬಾಡೂರು ಕಳೆಂಜಡ್ಕ ಸಂಕಪ್ಪ ಪೂಜಾರಿಯ ವರನ್ನು ಗೌರವಿಸಲಾಯಿತು. ಮಂಗಳೂರಿನಲ್ಲಿ ಡಾಕ್ಟರ್ ಆಗಿರುವ ತಸ್ರೀನ ಮುಬಶೀರ (ಬಾಡೂರಿನ ಪಿ.ಕೆ. ಮಹಮ್ಮದ್, ತಾಹಿರ ದಂಪತಿ ಪುತ್ರಿ)  ಅವರನ್ನು ಅಭಿನಂದಿಸಲಾಯಿತು.

ಬಾಡೂರಿನಲ್ಲಿ ರಸ್ತೆ ಬದಿಗಳ ಚರಂಡಿಯನ್ನು ಸರಿಪಡಿಸಲು, ಬೀದಿ ನಾಯಿಗಳ ಕಾಟವನ್ನು ತಡೆಗಟ್ಟಲು ಪಂಚಾಯತ್ ಅಧಿಕಾರಿಗಳಿಗೆ ಮನವಿ ನೀಡಲು ತೀರ್ಮಾನಿಸಲಾಯಿತು.

RELATED NEWS

You cannot copy contents of this page