ಬಾಯಾರಿನಲ್ಲಿ ಕುಟುಂಬ ಸಂಗಮ: ಶಾಸಕರಿಂದ ಉದ್ಘಾಟನೆ
ಬಾಯಾರು: ಪೈವಳಿಕೆ ಪಂಚಾ ಯತ್, ಬಾಯಾರು ಕುಟುಂಬ ಆರೋಗ್ಯ ಕೇಂದ್ರ ಹಾಗೂ ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು ಇವರ ಸಂಯುಕ್ತಾಶ್ರಯದಲ್ಲಿ ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಆಯೋಜಿಸಲಾದ ಪಾಲಿಯೇಟಿವ್ ಕುಟುಂಬ ಸಂಗಮ “ಸ್ನೇಹಸ್ಪರ್ಶಂ” ಕಾರ್ಯಕ್ರಮವನ್ನು ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿ ದರು. ಬಾಯಾರು ಡಾ. ಅತಿರಾ ಕೃಷ್ಣ ಸ್ವಾಗತಿಸಿದರು. ಪಂ.ಅಧ್ಯಕ್ಷೆ ಜಯಂತಿ ಅಧ್ಯಕ್ಷತೆ ವಹಿಸಿದ್ದರು. ಪಂ. ಉಪಾಧ್ಯಕ್ಷೆ ಪುಷ್ಪಲಕ್ಷ್ಮಿ, ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ಚಿಪ್ಪಾರ್, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜುಲ್ಫಿಕರ್ ಅಲಿ ಕಯ್ಯಾರ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಫಾತಿಮತ್ ಸೌರ, ಸಹಾಯಕ ಕಾರ್ಯದರ್ಶಿ ವೆಂಕಟೇಶ್ವರ ಭಟ್, ಡಾ. ಮುರಳೀಧರ ಶೆಟ್ಟಿ ಮಾತನಾಡಿದರು. ಪಂ. ಸದಸ್ಯರಾದ ಅಬ್ದುಲ್ಲ, ಮಮತಾ, ರಹಮತ್, ಗೀತಾ, ಪ್ರಶಾಂತಿ ವಿದ್ಯಾಕೇಂದ್ರದ ಮೆನೇಜರ್ ಮಹಾಲಿಂಗ ಭಟ್ ಉಪಸ್ಥಿತರಿದ್ದರು.