ಬಾಯಾರು- ಪೆರುವೋಡಿ ರಸ್ತೆ ಕುಸಿದು ಸಂಚಾರ ಮೊಟಕು: ಶೀಘ್ರ ಕಾಮಗಾರಿ ಆರಂಭಿಸಲು ಸಿಪಿಎಂ ಆಗ್ರಹ

ಬಾಯಾರು: ಮುಳಿಗದ್ದೆಯಿಂದ ಬೆರಿಪ್ಪದವುವರೆಗಿನ ಲೋಕೋಪ ಯೋಗಿ ಇಲಾಖೆಯ ಅಧೀನದಲ್ಲಿ ರುವ ರಸ್ತೆಯು ಪೆರುವೋಡಿಯಲ್ಲಿ ಕುಸಿದು ಬಿದ್ದು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಿಪಿಎಂ ಬಾಯಾರು ಲೋಕಲ್ ಸಮಿತಿ ಲೋ ಕೋಪಯೋಗಿ ಇಲಾಖೆ ಸಚಿವ ಮುಹಮ್ಮದ್ ರಿಯಾಸ್‌ರಿಗೆ ದೂರು ನೀಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಸಂದರ್ಶಿಸಿ ಸೂಕ್ತ ಕಾಮಗಾರಿ ನಡೆಸಲು ಟೆಂಡರ್ ಕ್ರಮಗಳನ್ನು ಪೂರ್ತಿಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಕಾಮಗಾರಿ ಆರಂಭಿಸಲು ಮುಂದಾಗಬೇಕು ಹಾಗೂ ವಾಹನ ಸಂಚಾರಕ್ಕೆ ಉಂಟಾಗುವ ತೊಂದರೆಯನ್ನು ಸರಿಪಡಿಸಬೇಕೆಂದು ಸಿಪಿಎಂ ಬಾಯಾರು ಲೋಕಲ್ ಸಮಿತಿ ಹೇಳಿಕೆಯಲ್ಲಿ ಆಗ್ರಹಿಸಿದೆ.

Leave a Reply

Your email address will not be published. Required fields are marked *

You cannot copy content of this page