ಬಾರಿಕ್ಕಾಡು ಅಂಜಾರಿಲ್ಲಂ ತರವಾಡು ಪುನರ್ ನಿರ್ಮಾಣ ಶಂಕುಸ್ಥಾಪನೆ
ಕಾಸರಗೋಡು: ಸಂಕಷ್ಟದಲ್ಲಿರು ವವರಿಗೆ ಸಹಾಯ ಒದಗಿಸುವುದು ಪ್ರತಿಯೋರ್ವ ಮನುಷ್ಯನ ಪ್ರಮುಖ ಕರ್ತವ್ಯವಾಗಿದೆ. ಇಲ್ಲದಿದ್ದರೆ ಆತನ ಜೀವನ ನಿರರ್ಥಕವಾಗಿದೆಯೆಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು. ಕೂಡ್ಲು ಕಾಳ್ಯಂಗಾಡು ಬಾರಿಕ್ಕಾಡು ಅಂಜಾರಿಲ್ಲ ತರವಾಡಿನ ಪುನರ್ ನಿರ್ಮಾಣದಂಗ ವಾಗಿ ನಿನ್ನೆ ನಡೆದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು. ಗಣೇಶ ಮಡಯ, ಜಗದೀಶ ಅತ್ತಾವರ ಉಪಸ್ಥಿತರಿದ್ದರು. ಪ್ರಮೋದ್ ಕುಮಾರ್ ಕುಂಬಳೆ ಸ್ವಾಗತಿಸಿ, ಪ್ರಭಾವತಿ ಟೀಚರ್ ವಂದಿಸಿದರು. ಮಮತಾ ಮಂಗಳೂರು ನಿರೂಪಿಸಿದರು.