ಬಾರಿನಲ್ಲಿ ಮದ್ಯ ಸೇವಿಸಿ ಗೆಳೆಯರ ಮಧ್ಯೆ ವಾಗ್ವಾದ: ಗಲಾಟೆ ಮಧ್ಯೆ ಕ್ರೀಡಾ ಅಧ್ಯಾಪಕ ಮೃತ್ಯು
ತೃಶೂರು: ಗೆಳೆಯ ಹಿಡಿದು ದೂ ಡಿದ ಕ್ರೀಡಾ ಅಧ್ಯಾಪಕ ಬಿದ್ದು ಮೃತ ಪಟ್ಟರು. ಪೂಂಗುನ್ನಂ ಹರಿಶ್ರೀ ಶಾಲಾ ಅಧ್ಯಾಪಕ ಚಕ್ಕಮುಕ್ ನಿವಾಸಿ ಅನಿಲ್ ಮೃತಪಟ್ಟವರು. ಬುಧವಾರ ರಾತ್ರಿ ೧೧.೩೦ರ ವೇಳೆ ಘಟನೆ ನಡೆದಿದೆ. ಗೆಳೆಯ ಚೂಲಿಶ್ಶೇರಿ ನಿವಾಸಿ ರಾಜು ವನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ರೀಜನಲ್ ಥಿಯೇಟರ್ ಸಮೀಪದ ಬಾರಿನಲ್ಲಿ ರಾತ್ರಿ ಅಧ್ಯಾಪಕ, ಗೆಳೆಯ ಮದ್ಯಪಾನಗೈದಿದ್ದರು. ಬಳಿಕ ಇವರು ಥಿಯೇಟರ್‌ಗೆ ತೆರಳಿ ಥಿಯೇಟ ರ್‌ನಲ್ಲಿ ಜರಗುತ್ತಿದ್ದ ಫೆಸ್ಟಿವಲ್‌ಗೆ ತೆರಳಿದ್ದು, ಅಲ್ಲಿ ಪರಸ್ಪರ ವಾಗ್ವಾದ ಉಂಟಾಗಿದೆ. ಈ ಮಧ್ಯೆ ಅನಿಲ್‌ನನ್ನು ಗೆಳೆಯ ರಾಜು ಹಿಡಿದು ದೂಡಿದ್ದಾನೆ. ಮುಖ ಅಡಿಗೆ ಬಿದ್ದ ಅಧ್ಯಾಪಕ ಗಾಯ ಗೊಂಡಿದ್ದು, ಬಳಿಕ ಆಸ್ಪತ್ರೆಗೆ ಕೊಂಡು ಹೋದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.