ಕಾಸರಗೋಡು: ಅಪ್ರಾಪ್ತ ಗಂಡುಮಕ್ಕಳಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ೭೦ ವರ್ಷ ಪ್ರಾಯದ ವೃದ್ಧನ ವಿರುದ್ಧ ಹೊಸದುರ್ಗ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.
ಹೊಸದುರ್ಗ ಪಡನ್ನಕ್ಕಾಡ್ ವಲಿಯವೀಡು ಬಳಿಯ ಸುಕುಮಾರನ್ (೭೦) ಬಂಧಿತ ಆರೋಪಿ. ಹೊಸದುರ್ಗ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಎಂ.ವಿ. ಆಜಾದ್ ಈತನನ್ನು ಬಂಧಿಸಿದೆ. ೧೨ ಮತ್ತು ೧೩ ವರ್ಷದ ಬಾಲಕರಿಗಿ ಕಿರುಕುಳ ನೀಡಿದ ಆರೋಪದಂತೆ ಚೈಲ್ಡ್ ಲೈನ್ ನೀಡಿದ ದೂರಿನಂತೆ ಪೊಲೀಸರು ಈ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಬಂಧಿತನನ್ನು ಬಳಿಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.