ಬಾಲಕಿಗೆ ಕಿರುಕುಳ ಯತ್ನ : ವೃದ್ದನ ವಿರುದ್ಧ ಪೋಕ್ಸೋ ಕೇಸು
ಬದಿಯಡ್ಕ: 16ರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ದೂರಿನಂತೆ 60ರ ಹರೆಯದ ವೃದ್ದನ ವಿರುದ್ಧ ಬದಿಯಡ್ಕ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ಬಾಲಕಿ ಸಂಜೆ ಶಾಲೆ ಬಿಟ್ಟು ಮನೆಗೆ ಮರಳಿದ್ದಳು. ಅನಂತರ ಕೆಲಸಕ್ಕೆ ತೆರಳಿದ್ದ ತಾಯಿಗೆ ಫೋನ್ ಕರೆ ಮಾಡಲೆಂದು ಬಾಲಕಿ ನೆರೆಮನೆಗೆ ತೆರಳಿದ್ದಳು. ಈ ವೇಳೆ ಅಲ್ಲಿ ಏಕಾಂಗಿಯಾಗಿದ್ದ ಆರೋಪಿಯು ಬಾಲಕಿಯ ಮೇಲೆ ತಿರುಕುಳಕ್ಕೆ ಯತ್ನಿಸಿದ್ದಾನೆಂದು ದೂರಲಾಗಿದೆ.