ಬಾಲಕಿಯನ್ನು ಅಪಹರಿಸಿ ದೌರ್ಜನ್ಯ: ಆರೋಪಿಯ ಸೆರೆಗೆ ಸಹಾಯಕವಾದದ್ದು ರಸ್ತೆಯಲ್ಲಿ ಮಲಗಿದ್ದ ಮದ್ಯಪಾನಿಯ ಫೋನ್‌ನಿಂದ ಮನೆಗೆ ಮಾಡಿದ ಕರೆ

ಕಾಸರಗೋಡು: ಮನೆಯಲ್ಲಿ ನಿದ್ರಿಸುತ್ತಿದ್ದ 10 ವರ್ಷ ಪ್ರಾಯದ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ದೌರ್ಜನ್ಯಗೈದ ಪ್ರಕರಣದ ಆರೋಪಿ ಟಿ.ಎ. ಸಲೀಂ (39) ಆಂಧ್ರದಿಂದ ಸೆರೆಯಾಗಲು ಪೊಲೀಸರಿಗೆ ಸಹಾಯ ಮಾಡಿರುವುದು ಮನೆಗೆ ಕರೆದ ಫೋನ್ ಕಾಲ್ ಆಗಿದೆ. ಮದ್ಯಪಾನ ಮಾಡಿ ಪ್ರಜ್ಞೆ ಇಲ್ಲದೆ ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್ ತೆಗೆದು ಸಲೀಂ ಸಂಬಂಧಿಕರಿಗೆ ಕರೆ ಮಾಡಿರುವುದೇ ಆರೋಪಿಯನ್ನು ಸೆರೆ ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿರುವುದು. ಸಲೀಂ ಕರೆ ಮಾಡಿದ ಫೋನ್‌ನ ಲೊಕೇಶನ್ ತೆಗೆದು ಪೊಲೀಸರು ಆಂಧ್ರ ಪ್ರದೇಶದ ಅಡೋಣಿಯಿಂದ ಆತನನ್ನು ಸೆರೆ ಹಿಡಿದಿದ್ದಾರೆ. ಸೆರೆ ಹಿಡಿಯಲು ಪೊಲೀಸರು ಹರಸಾಹಸ ನಡೆಸಬೇಕಾಗಿ ಬಂದಿದೆ.

ಕಾಞಂಗಾಡ್ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಿಂದ ಎಪ್ರಿಲ್ 15ರಂದು ಮುಂಜಾನೆ 2.30ರ ವೇಳೆ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಗೈದು ಚಿನ್ನದ ಬೆಂಡೋಲೆ ಯನ್ನು ಅಪಹರಿಸಿದ ಬಳಿಕ ಬಾಲಕಿ ಯನ್ನು ದಾರಿಯಲ್ಲಿ ಉಪೇಕ್ಷಿಸಿದ್ದನು. ಬಾಲಕಿಯ ಅಜ್ಜ ದನದ ಹಾಲು ಕರೆ ಯಲೆಂದು ಹೊರಗಿಳಿದಾಗ ಬಾಲಕಿ ಯನ್ನು ಅಪಹರಿಸಲಾಗಿದೆ. ದುಷ್ಕೃತ್ಯ ನಡೆಸಿದ ಬಳಿಕ ಆರೋಪಿ ಕರ್ನಾಟ ಕದ ಮೂಲಕ ಆಂಧ್ರ ಪ್ರದೇಶಕ್ಕೆ ತೆರಳಿದ್ದಾನೆ. ರಾಯಚೂರ್‌ನಲ್ಲಿ ಈತ ಈ ಮೊದಲು ಕೆಲಸ ಗೈದಿದ್ದನು. ಅಂದು ಅಲ್ಲಿ ಪರಿಚಯಗೊಂಡ ಗೆಳತಿಯೊಬ್ಬಳು ಈತನಿಗೆ ತಾತ್ಕಾಲಿಕ ಅಬಯ ನೀಡುವನೆಂಬ ನಿರೀಕ್ಷೆಯಲ್ಲಿ ಆತ ಅಲ್ಲಿಗೆ ತೆರಳಿದ್ದನು. ಆದರೆ ಪೊಲೀಸರು ಈತನ ಗೆಳತಿಯನ್ನು ನಿರೀಕ್ಷಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆತ ಅಲ್ಲಿಂದಲೂ ತೆರಳಿದ್ದನು. ಮದ್ಯಪಾನಿಯ ಮೊಬೈಲ್ ಉಪಯೋಗಿಸಿ ಈತ ಆರು ನಂಬ್ರಗಳಿಗೆ ಕರೆ ಮಾಡಿದ್ದನು. ಬಳಿಕ ಆ ಫೋನ್ ಸ್ವಿಚ್ ಆಫ್ ಆಗಿತ್ತು. ಇದರ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಆರೋಪಿ ಅಡೋಣಿಯಲ್ಲೇ ಇದ್ದಾನೆಂದು ಖಚಿತಪಡಿಸಿದ್ದರು. ಅಲ್ಲಿಂದ ಬೆಂಗಳೂರಿಗೆ ತೆರಳುವ ಸಿದ್ಧತೆಯಲ್ಲಿ ಆರೋಪಿ ಇದ್ದಾಗ ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ. 200ಕ್ಕೂ ಅಧಿಕ ಸಿಸಿ ಟಿವಿ ದೃಶ್ಯಗಳನ್ನು ನೋಡಿ ಆರೋಪಿಯ ಚಹರೆಯನ್ನು ಪೊಲೀಸರು ಗುರುತಿಸಿಕೊಂಡಿದ್ದರು.

ಪಿಲ್ಲೇರುಪೀಡಿಗ ಎಂಬ ಸ್ಥಳದಿಂದ ಲಭಿಸಿದ ದೃಶ್ಯದಲ್ಲಿ ದೌರ್ಜ ನ್ಯಗೈದ ದಿನದಂದು ಈತ ಈ ಪರಿಸರದಲ್ಲೇ ಇದ್ದ ಎಂಬುದಕ್ಕೆ ಪುರಾವೆ ಲಭಿಸಿತ್ತು. ಇದಕ್ಕೂ ಮೊದಲು ಇನ್ನೊಂದು ಮನೆಗೆ ನುಗ್ಗಿ ಅಲ್ಲಿನ ಮಹಿಳೆಯ ಸರ ಎಳೆದು ಈತ ಪರಾರಿಯಾಗಿದ್ದನು. ಈ ಎರಡೂ ಘಟನೆಯಲ್ಲೂ ಈತ ಧರಿಸಿದ ಬಟ್ಟೆಬರೆ ಒಂದೇ ಆಗಿತ್ತು. ನಡೆದಾಡುವುದು ಸಹಿತದ ದೃಶ್ಯಗಳಲ್ಲಿನ ಸಾಮ್ಯತೆ ಕೂಡಾ ಈತನನ್ನು ಗುರುತು ಹಿಡಿಯಲು ಪೊಲೀಸರಿಗೆ ಸಹಾಯಕವಾಯಿತು.ಕೊಡಗು ನಾಪೊಕ್ಲು  ನಿವಾಸಿಯಾದ ಸಲೀಂ 14 ವರ್ಷದ ಹಿಂದೆ ಕಾಞಂಗಾಡ್‌ನ  ಕರಾವಳಿ ಪ್ರದೇಶದ ಮಹಿಳೆಯನ್ನು ವಿವಾಹಿತನಾಗಿ ಇಲ್ಲಿ ವಾಸ ಆರಂಭಿಸಿದ್ದನು. ಇವರಿಗೆ ನಾಲ್ಕು ಮಕ್ಕಳಿದ್ದಾರೆ. ಕಣ್ಣೂರು ಡಿಐಜಿ ಥೋಮ್ಸನ್ ಜೋಸ್‌ರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಸಲೀಂ ಪೊಲೀಸರಲ್ಲಿ ಹೇಳಿದ್ದು

ಆರೋಪಿ ಸಲೀಂನನ್ನು ಕಾಞಂಗಾಡ್‌ಗೆ ತಂದು ಪೊಲೀಸರು ವಿಚಾರಿಸಿದಾಗ ಆತ ಈ ರೀತಿ ಹೇಳಿಕೆ ನೀಡಿದ್ದಾನೆ. ಬಾಲಕಿಯನ್ನು ದೌರ್ಜನ್ಯಗೈದ ಬಳಿಕ ೫ ದಿನ ತಾನು ಅನ್ನ ಆಹಾರವಿಲ್ಲದೆ ಪತ್ನಿಯ ಮನೆಯ ಅಟ್ಟದಲ್ಲಿ ಅವಿತು ಕುಳಿದಿದ್ದೆ. ರಾಷ್ಟ್ರೀಯ ಹೆದ್ದಾರಿಯ ಸಿಸಿಟಿವಿಯಲ್ಲಿ ದೃಶ್ಯ ಗೋಚರಿಸಿದರೂ ಆ ಬಳಿಕ ಸಲೀಂ ಎಲ್ಲಿ ಹೋಗಿದ್ದಾನೆ ಎಂಬುದಕ್ಕೆ ಆತನ ಹೇಳಿಕೆಯಿಂದ ಪೊಲೀಸರಿಗೆ ಉತ್ತರ ಲಭಿಸಿದೆ. ಒಳದಾರಿಯಲ್ಲಿ ತಲುಪಿದ ಈತ ಪತ್ನಿಗೂ ತಿಳಿಯದೆ ಅಟ್ಟದಲ್ಲಿ ಅವಿತುಕುಳಿತಿದ್ದನು. ಬಳಿಕ ಅದೇ ದಾರಿಯಲ್ಲಿ ಸಾಗಿ ಮೈಸೂರು ಮೂಲಕ ಆಂಧ್ರಕ್ಕೆ ತೆರಳಿರುವುದಾಗಿ ಪೊಲೀಸರಲ್ಲಿ ತಿಳಿಸಿದ್ದಾನೆ.

Leave a Reply

Your email address will not be published. Required fields are marked *

You cannot copy content of this page