ಬಾಲಕಿಯನ್ನು ಬೇಕಲ ಕೋಟೆಗೆ ಕರೆದೊಯ್ದು ಕಿರುಕುಳ: ಆರೋಪಿ ಸೆರೆ
ಕಾಸರಗೋಡು: ಹದಿನೇಳರ ಹರೆಯದ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದು ಕಿರುಕುಳ ನೀಡಿದ ಯುವಕನನ್ನು ಪೊಲೀಸರು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ. ಪಳ್ಳಿಕ್ಕರೆ ಚೇಟುಕುಂಡು ನಿವಾಸಿ ಮುಹಮ್ಮದ್ ಆಶಿಕ್ (27) ಎಂಬಾತನನ್ನು ಅಂಬ ಲತ್ತರ ಪೊಲೀಸರು ಬಂಧಿಸಿದ್ದಾರೆ. ಇದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿಯನ್ನು ಈತ ಕಾರಿನಲ್ಲಿ ಕರೆದೊಯ್ದಿದ್ದನು. ಬಳಿಕ ಹಲವು ಪ್ರದೇಶಗಳಲ್ಲಾಗಿ ತಿರುಗಾಡಿ ಕೊನೆಗೆ ಬೇಕಲಕೋಟೆಗೆ ಕರೆ ದೊಯ್ದು ಕಿರುಕುಳ ನೀಡಿರುವುದಾಗಿ ದೂರಲಾಗಿದೆ.