ಬಾಲಡ್ಕದಲ್ಲಿ ಯುವಕನಿಗೆ ಇರಿತ, ಓರ್ವ ಸೆರೆ

ಬದಿಯಡ್ಕ: ನೆಕ್ರಾಜೆ ಗ್ರಾಮದ ಬಾಲಡ್ಕದ ಆಟೋರಿಕ್ಷಾ ಸ್ಟಾಂಡ್ ಬಳಿ ನೆಕ್ರಾಜೆ ಪೈಕ ಚಾಮುಂಡಿಮೂಲೆ ಹೌಸ್‌ನ ಬಾಲಕೃಷ್ಣನ್ ಎಂ. (೩೮) ಎಂಬಾತನನ್ನು ಇರಿದು ಗಾಯಗೊಳಿಸಿದ ಪ್ರಕರಣದ ಆರೋಪಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ನೆಕ್ರಾಜೆ ಅರ್ಲಡ್ಕ ನಿವಾಸಿ ರಂಜಿತ್ ಬಂಧಿತನಾದ ಆರೋಪಿಯಾಗಿದ್ದು, ಆತನ ವಿರುದ್ಧ ನರಹತ್ಯಾ ಯತ್ನ ಪ್ರಕರಣ ದಾಖಲಿಸಲಾಗಿದೆ. ಡಿಸೆಂಬರ್ ೨೮ರಂದು ಬೆಳಿಗ್ಗೆ ಬಾಲಡ್ಕ ಆಟೋರಿಕ್ಷಾ ಸ್ಟಾಂಡ್ ಬಳಿ ವೈಯಕ್ತಿಕ ದ್ವೇಷದಿಂದ ಆರೋಪಿ ರಂಜಿತ್ ತನ್ನ ಅಂಗಿಯ ಕಾಲರ್ ಹಿಡಿದೆಳೆದು ಕೊಲೆ ಬೆದರಿಕೆ ಒಡ್ಡಿ ತನಗೆ ಚಾಕುವಿನಿಂದ ಇರಿದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಬಾಲಕೃಷ್ಣನ್ ಆರೋಪಿಸಿದ್ದಾನೆ.

You cannot copy contents of this page