ಬಾಲಿವುಡ್ ನಟ ಸೈಫ್ ಆಲಿಖಾನ್‌ಗೆ ಇರಿತ: ಆಸ್ಪತ್ರೆಗೆ; ನಾಲ್ವರ ಸೆರೆ

ಮುಂಬಯಿ: ಬಾಲಿವುಡ್ ನಟ ಸೈಫ್ ಆಲಿಖಾನ್ ಇರಿತದಿಂದ ಗಾಯ ಗೊಂಡಿದ್ದಾರೆ. ಗಂಭೀರ ಗಾಯಗೊಂಡ ಇವರನ್ನು ಮುಂಬಯಿಯ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ ಎರಡೂವರೆ ಗಂಟೆಗೆ ಘಟನೆ ನಡೆದಿದೆ. ಮನೆಯೊಳಗಿನಿಂದ ಶಬ್ದ ಕೇಳಿದ ಹಿನ್ನೆಲೆಯಲ್ಲಿ ನಟ ಹಾಗೂ ಕುಟುಂಬ ಎದ್ದು ನೋಡಿದಾಗ ಅಕ್ರಮಿಗಳು ಇರಿದಿದ್ದಾರೆ. ನಟನ ಶರೀರದಲ್ಲಿ ಆರು ಇರಿತದ ಗಾಯಗಳಿವೆ ಎಂದು ಅದರಲ್ಲಿ ಎರಡು ದೊಡ್ಡ ಮಟ್ಟದ ಗಾಯವೆಂದು ಪೊಲೀಸರು ತಿಳಿಸಿದ್ದಾರೆ. ಆಕ್ರಮಣದ ಹಿಂದೆ ಕಳವಿಗೆ ಬಂದವರಾಗಿರಬೇಕೆಂದು ಶಂಕಿಸಲಾಗಿದೆ. ಆದರೆ ಇದನ್ನು ಪೊಲೀಸರು ಖಚಿತಪಡಿಸಿಲ್ಲ.

ಈ ಘಟನೆ ನಡೆದ ತಕ್ಷಣ ಕಾರ್ಯಾಚರಣೆ ಆರಂಭಿಸಿದ ಬಾಂದ್ರಾ ಪೊಲೀಸರು ಶಂಕಿತ ನಾಲ್ವರು ಆರೋಪಿಗಳನ್ನು ತಕ್ಷಣ ಬಂಧಿಸಿದ್ದಾರೆ.  ಮುಂಬೈ ಬಾಂದ್ರಾ ಪಶ್ಚಿಮದಲ್ಲಿರುವ ಸೈಫ್ ಆಲಿಖಾನ್‌ರ ನಿವಾಸದಲ್ಲೇ ಇಂದು ಕಳವು ಉದ್ದೇಶದಿಂದ ಮನೆಗೆ ನುಗ್ಗಿದ ದರೋಡೆಕೋರರು ಸೈಫ್ ಆಲಿಖಾನ್‌ರಿಗೆ ಇರಿದು ಅಲ್ಲಿಂದ ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬಾಂದ್ರಾ ಪೊಲೀಸರು ಎಫ್‌ಐಆರ್ ದಾಖಲಿಸಿ ಸಮಗ್ರ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page