ಬಾಳೆಕುಮೇರಿಯಲ್ಲಿ ದಾರಿ ದೀಪ ಅಳವಡಿಸಲು ವಾರ್ಡ್ ಕಾಂಗ್ರೆಸ್ ಸಮಿತಿ ಆಗ್ರಹ
ಬದಿಯಡ್ಕ: ಪಂಚಾಯತ್‌ನ ನಾಲ್ಕನೇ ವಾರ್ಡ್ ಅಭಿವೃದ್ಧಿಗೊಳಿಸಬೇಕು, ಬಾಳೆಕುಮೇರಿ ಪ್ರದೇಶದಲ್ಲಿ ಬೀದಿ ದೀಪ ಅಳವಡಿಸಬೇಕು ಎಂದು ವಾರ್ಡ್ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ. ಬಣ್ಪುತ್ತಡ್ಕ ಕಮ್ಯುನಿಟಿ ಸಭಾಂಗಣದಲ್ಲಿ ನಡೆದ ನಾಲ್ಕನೇ ವಾರ್ಡ್ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಅಧ್ಯಕ್ಷ ಈಶ್ವರ ನಾಯ್ಕ ಕುಂಟಾಲುಮೂಲೆ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಕುಂಞಂಬು ನಾಯರ್ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಶ್ಯಾಮ್‌ಪ್ರಸಾದ್ ಮಾತನಾಡಿ, ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಯಾದಿಯಲ್ಲಿ ಸೇರಿಸಲು ಕರೆ ನೀಡಿದರು. ಕಾರಡ್ಕ ಬ್ಲೋಕ್ ಉಪಾಧ್ಯಕ್ಷ ಗಂಗಾಧರ ಗೋಳಿಯಡ್ಕ, ಮಂಡಲ ಉಪಾಧ್ಯಕ್ಷ ಜಗನ್ನಾಥ ರೈ, ಕಾರ್ಯದರ್ಶಿ ರವಿಕುಮಾರ್ ಮಣಿಯಾಣಿ, ಅಬೂಬಕ್ಕರ್ ಬಣ್ಪುತ್ತಡ್ಕ, ಜೋನಿ ಕ್ರಾಸ್ತಾ, ಖಮರುದ್ದೀನ್, ಉದಯ ಕುಮಾರ್ ಭಾಗವಹಿಸಿದರು. ಬಾಲಕೃಷ್ಣ ಸ್ವಾಗತಿಸಿ, ಉದಯ ಕುಮಾರ್ ವಂದಿಸಿದರು.