ಬಾವಿಗೆ ಬಿದ್ದ ವಲಸೆ ಕಾರ್ಮಿಕನ ರಕ್ಷಣೆ

ಕಾಸರಗೋಡು: ನಿರ್ಮಾಣ ಕೆಲಸ ನಡೆಯುತ್ತಿದ್ದ ಬಾವಿಗೆ ಬಿದ್ದ ವಲಸೆ ಕಾರ್ಮಿಕನನ್ನು ಕಾಸರಗೋಡು ಅಗ್ನಿಶಾಮಕದಳ ಆಗಮಿಸಿ ರಕ್ಷಿಸಿದ ಘಟನೆ ಚೆರ್ಕಳದಲ್ಲಿ ನಡೆದಿದೆ. ಕರ್ನಾಟಕ ನಿವಾಸಿ ಸುರೇಶ್ (೨೬) ಪ್ರಾಣಾಪಾಯದಿಂದ ರಕ್ಷಿಸಲ್ಪಟ್ಟ ಕಾರ್ಮಿಕ. ಚೆರ್ಕಳ ಕೋಲಾಚಿಯಡ್ಕ ಕುಂಜಿರಿಕ್ಕಾನದ ಖಾಸಗಿ ವ್ಯಕ್ತಿಯ ಹಿತ್ತಿಲಲ್ಲಿ ಬಾವಿಗೆ ನಿನ್ನೆ ಆವರಣಗೋಡೆ ನಿರ್ಮಿಸಲೆಂದು ಮಣ್ಣು ತೆಗೆಯುತ್ತಿದ್ದ ವೇಳೆ ಸುರೇಶ್ ನಿಯಂತ್ರಣ ತಪ್ಪಿ ೨೦ ಅಡಿ ಆಳದ ಬಾವಿಗೆ ಬಿದ್ದಿದ್ದಾರೆ. ಆ ಬಗ್ಗೆ ನೀಡಲಾದ ಮಾಹಿತಿಯಂತೆ ಅಗ್ನಿಶಾಮಕ ದಳ ತಕ್ಷಣ ಅಲ್ಲಿಗೆ ಆಗಮಿಸಿ ಸುಮಾರು ಒಂದು ತಾಸಿನ ತನಕ ಶತಪ್ರಯತ್ನದಲ್ಲಿ ಗಂಭೀರ ಗಾಯಗೊಂಡ ಸುರೇಶ್‌ರನ್ನು ಬಾವಿಯಿಂದ ಮೇಲಕ್ಕೆತ್ತಿ ಆಂಬುಲೆನ್ಸ್‌ನಲ್ಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ.

You cannot copy contents of this page