ಬಾವಿಯಿಂದ ನೀರು ಸೇದುತ್ತಿದ್ದ ಯುವತಿಯ ಕುತ್ತಿಗೆಗೆ ಹಗ್ಗ ಬಿಗಿದು ಕಿರುಕುಳಕ್ಕೆ ಯತ್ನ

ಕಾಸರಗೋಡು: ಬಾವಿಯಿಂದ ನೀರು ಸೇದುತ್ತಿದ್ದ ಯುವತಿಯ ಕುತ್ತಿಗೆಗೆ ಹಗ್ಗ ಬಿಗಿದು ಕಿರುಕುಳ ನೀಡಲೆತ್ನಿಸಿದ ಘಟನೆಯೊಂದು ಕಾಸರಗೋಡು ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶವೊಂದರಲ್ಲಿ ನಡೆದಿರುವುದಾಗಿ ಹೇಳಲಾಗುತ್ತಿದೆ.

ಯುವತಿಯ ಕುತ್ತಿಗೆಗೆ ಹಗ್ಗ ಬಿಗಿದು  ಕಿರುಕುಳ ನೀಡಲೆತ್ನಿಸಿದಾಗ ಆಕೆ ಜೋರಾಗಿ ಕಿರುಚಿದಳೆಂದೂ ಆ ಸದ್ದು ಕೇಳಿದ ಮನೆಯವರು ಮತ್ತು ನೆರೆಮನೆಯವರು ಅಲ್ಲಿಗೆ  ಓಡಿ ಬಂದಾಗ ಕಿರುಕಳ ನೀಡಲೆತ್ನಿಸಿದ ವ್ಯಕ್ತಿ ಅಲ್ಲಿಂದ ಪರಾರಿಯಾಗಿರುವು ದಾಗಿಯೂ ತಿಳಿಸಲಾಗಿದೆ.  ಈ ಬಗ್ಗೆ ಪೊಲೀಸರು ಮತ್ತು ಗುಪ್ತಚರ ವಿಭಾಗದವರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page