ಬಿಎಂಎಸ್ ಮೀನು ಕಾರ್ಮಿಕರ ಸಂಘಟನೆಯಿಂದ ಫಿಶರೀಸ್ ಕಚೇರಿ ಮುಂಭಾಗ ಧರಣಿ
ಕಾಸರಗೋಡು: ಕೇರಳ ಪ್ರದೇಶ್ ಮತ್ಸ್ಯ ತೊಯಿಲಾಳಿ ಸಂಘ್ (ಬಿಎಂಎಸ್) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ಫಿಶರೀಸ್ ಕಚೇರಿ ಮುಂಭಾಗ ನಡೆಸಿದ ಧರಣಿಯನ್ನು ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಕೇರಳದ ಕರಾವಳಿ ತೀರದಲ್ಲಿ ದುಡಿಯುವ ಮತ್ಸ್ಯ ಕಾರ್ಮಿಕರ, ಸಂಬಂಧಿತ ಕಾರ್ಮಿಕರ ಕ್ಷೇಮನಿಧಿ ಸೌಲಭ್ಯಗಳನ್ನು ಮೂರು ಪಟ್ಟು ಆಗಿ ಹೆಚ್ಚಿಸಲಾಗಿದ್ದು, ಕಾರ್ಮಿಕರಿಗೆ ಲಭಿಸಬೇಕಾದ ಸೌಲಭ್ಯಗಳನ್ನು ಹಲವು ತಿಂಗಳಿಂದ ಸರಕಾರ ತಡೆದಿಟ್ಟುಕೊಂಡಿದೆ ಎಂದು ಧರಣಿಯಲ್ಲಿ ಆರೋಪಿಸಲಾಯಿತು. ಸಂಘಟನೆಯ ಜಿಲ್ಲಾ ಅಧ್ಯಕ್ಷ ಪಿ. ದಿನೇಶ್ ಬಂಬ್ರಾಣ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಸುರೇಶ್ ದೇಳಿ, ಸೆಲ್ ಸಂಚಾಲಕ ಸುರೇಶ್ ಕೀಯೂರ್, ಬಿಎಂಎಸ್ ಕಾಸರಗೋಡು ವಲಯ ಕಾರ್ಯದರ್ಶಿ ರಿಜೇಶ್ ಜೆ.ಪಿ.ನಗರ ಮಾತನಾಡಿದರು. ಬಿಎಂಎಸ್ ಕಾಸರಗೋಡು ವಲಯ ಪದಾಧಿಕಾ ರಿಗಳಾದ ಶಿವನ್ ತಾಳಿಪಡ್ಪು, ಹರಿಕೃಷ್ಣನ್ ಅಜಂತ, ಬಾಬು ಮೋನ್, ಜನಾರ್ದನನ್ ಕಡಪ್ಪುರ, ವಾರ್ಡ್ ಕೌನ್ಸಿಲರ್ ಅಜಿತ್ ಕಡಪ್ಪುರ, ರಂಜಿತ್ ಕಡಪ್ಪುರ, ಅಶ್ವತಿ ಕಡಪ್ಪುರ, ಪ್ರಿಯೇಶ್ ಕುಂಬಳೆ, ಪ್ರಜಿತ್ ಕುಂಬಳೆ, ಶಶಿ ಉಪ್ಪಳ ಭಾಗವಹಿಸಿದರು. ಜಿಲ್ಲಾ ಕಾರ್ಯದರ್ಶಿ ರಮೇಶ್ ಕಡಪ್ಪುರ ಸ್ವಾಗತಿಸಿ, ಪದ್ಮನಾಭ ಕಡಪ್ಪುರ ವಂದಿಸಿದರು.