ಬಿಎಂಎಸ್ ಸ್ಥಾಪನಾ ದಿನಾಚರಣೆ ಅಂಗವಾಗಿ ವಿವಿಧೆಡೆ ಧ್ವಜಾರೋಹಣ
ಉಪ್ಪಳ: ಬಿಎಂಎಸ್ 69ನೇ ಸ್ಥಾಪನಾ ದಿನಾಚರಣೆ ಅಂಗವಾಗಿ ವಿವಿಧ ಕಡೆಗಳಲ್ಲಿ ಧ್ವಜಾರೋಹಣ ನಡೆಸಲಾಯಿತು. ನಾರಾಯಣ ಮಂಗಲ ನಿರ್ಮಾಣ ಯೂನಿಟ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೂನಿಟ್ ಅಧ್ಯಕ್ಷ ವಸಂತ ಆಚಾರ್ಯ ನಾರಾಯಣ ಮಂಗಲ ಧ್ವಜಾರೋಹಣಗೈದರು. ಐತ್ತಪ್ಪ ನಾರಾಯಣ ಮಂಗಲ ಧ್ವಜ ದಿನದ ವಿಷಯವನ್ನು ತಿಳಿಸಿದರು. ಶೋಭಾ ಟೀಚರ್ ಹಾಗೂ ಯೂನಿಟ್ ಸದಸ್ಯರು ಉಪಸ್ಥಿತರಿದ್ದರು. ನಾರಾಯಣ ಮಂಗಲ ಟೈಲರಿಂಗ್ ಯೂನಿಟ್, ಚೇರಾಲು ಟೈಲರಿಂಗ್ ಯೂನಿಟ್, ಮಂಗಲ್ಪಾಡಿ ಪಂಚಾಯತ್ ಯೂನಿಟ್, ಪ್ರತಾಪನಗರ ಯೂನಿಟ್, ಕುಂಬಳೆ ವಲಯದ ವಿವಿಧ ಯೂನಿಟ್ಗಳಲ್ಲಿ ಧ್ವಜಾರೋಹಣಗೈದು ಸಿಹಿ ತಿಂಡಿ ಹಂಚಿದರು.