ಬಿಜೆಪಿ ನೇತಾರ ಪಿ. ರಮೇಶ್‌ರ ಸಹೋದರ ಸುರೇಶ್‌ಬಾಬು ನಿಧನ

ಕಾಸರಗೋಡು: ಬಿಜೆಪಿ ನೇತಾರನೂ, ಕಾಸರಗೋಡು ನಗರಸಭೆಯ ವಿಪಕ್ಷ ನೇತಾರ ಪಿ. ರಮೇಶ್‌ರ ಸಹೋದರ ಪಿ.ಸುರೇಶ್‌ಬಾಬು (58) ನಿಧನಹೊಂದಿದರು. ಶ್ವಾಸಕೋಶ ಸಂಬಂಧ ಅಸೌಖ್ಯ ಬಾಧಿಸಿದ್ದ ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮಂಗಳೂರಿನಲ್ಲಿ ಟ್ರಾವೆಲ್ ಏಜೆಂಟ್ ಆಗಿದ್ದರು. ತಾಳಿಪಡ್ಪು ರಾಂನಿಲಯದ ದಿ| ವಿ. ಕೃಷ್ಣನ್ ನಾಯರ್-ಪಿ. ದಾಕ್ಷಾಯಿಣಿ ದಂಪತಿಯ ಪುತ್ರನಾದ ಇವರು ಅವಿವಾಹಿತನಾಗಿದ್ದರು.

ಮೃತರು ಸಹೋದರ-ಸಹೋದರಿಯರಾದ ಪಿ. ಗಣೇಶ್  (ಆರ್‌ಎಸ್‌ಎಸ್ ಮಾಜಿ ಪ್ರಚಾರಕ, ಮಂಗಳೂರು), ಪಿ. ರಮೇಶ್, ನ್ಯಾಯವಾದಿ  ಪಿ. ಮುರಳೀಧgನ್, ಅನ್ನಪೂರ್ಣ, ಕೃಷ್ಣ ಕುಮಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ ದ್ದಾರೆ. ಅಂತ್ಯಸಂಸ್ಕಾರ ಕೇಳುಗುಡ್ಡೆ ಸ್ಮಶಾನದಲ್ಲಿ ನಡೆಸಲಾಯಿತು.

Leave a Reply

Your email address will not be published. Required fields are marked *

You cannot copy content of this page