ಬಿಜೆಪಿ ಮುಖಂಡ ಕೃಷ್ಣಪ್ಪ ಮಡಿಕ ನಿಧನ

ವರ್ಕಾಡಿ: ಕಾಪಿರಿ ಶಾಲಾ ಬಳಿಯ ಮಡಿಕ ನಿವಾಸಿ ಬಿಜೆಪಿ ಮುಖಂಡ ಕೃಷ್ಣಪ್ಪ (47) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ಸಂಜೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವಿವಾಹಿತರಾಗಿದ್ದು, ಮೃತರು ಸಹೋದರ ಸಹೋದರಿಯರಾದ ಶೇಖರ, ಗುರುವ, ಕಮಲ, ಲಲಿತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ ಕೊರಗ, ತಾಯಿ ಐತೆ ಈ ಹಿಂದೆ ನಿಧನರಾಗಿದ್ದಾರೆ. ಇವರು ಮೇಸ್ತಿç ಕೆಲಸದ ಗುತ್ತಿಗೆದಾರರಾಗಿದ್ದಾರೆ. ಹಲವು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. ಸಂಘ ಪರಿವಾರದ ಸಂಘಟನೆಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿ, ಸ್ಥಳೀಯ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಸಕ್ರಿಯರಾಗಿ ದುಡಿಯುತ್ತಿದ್ದರು. ವರ್ಕಾಡಿ ಶ್ರೀ ಕಾವಿ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬಿಜೆಪಿ ಮಂಜೇಶ್ವರ ಮಂಡಲ ಕಾರ್ಯದರ್ಶಿ, ಬಿಜೆಪಿ ಮಂಜೇಶ್ವರ ಮಂಡಲ ಎಸ್.ಸಿ ಮೋರ್ಚ ಅಧ್ಯಕ್ಷರಾಗಿ ಹಾಗೂ ಸಹಕಾರ ಭಾರತಿಯಿಂದ ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಮೃತರ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ರೈ, ಮಂಡಲ ಅಧ್ಯಕ್ಷ ಆದರ್ಶ್.ಬಿ.ಎಂ, ಮುಖಂಡರಾದ ಅಶ್ವಿನಿ.ಎಂ.ಎಲ್, ಮಣಿಕಂಠ ರೈ, ಯತೀರಾಜ್ ಶೆಟ್ಟಿ, ರಾಜ್‌ಕುಮಾರ್, ರವಿರಾಜ್, ಕೆ.ವಿ ಭಟ್, ಪದ್ಮನಾಭ ರೈ, ಎ.ಕೆ ಕಯ್ಯಾರ್, ಹರ್ಷಾದ್ ವರ್ಕಾಡಿ, ಮಧುಸೂದನ್ ಭಟ್, ಆನಂದ ತಚ್ಚಿರೆ, ವಸಂತ ವರ್ಕಾಡಿ, ಸದಾಶಿವ ಮಂಟಮೆ ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು. ನಿಧನಕ್ಕೆ ಶ್ರೀ ಕಾವೀ ಕೃಪಾ ಸಂಕೇತ್ ಮಿತ್ರ ಮಂಡಳಿ ವರ್ಕಾಡಿ, ಶ್ರೀ ಕಾವೀ ಸುಬ್ರಹ್ಮಣ್ಯ ದೇವಸ್ಥಾನ ವರ್ಕಾಡಿ ಇದರ ಆಡಳಿತ ಹಾಗೂ ಅಭಿವೃದ್ದಿ ಸಮಿತಿ, ಶ್ರೀ ಮಡಿಕತ್ತಾಯ ಧೂಮಾವತಿ ದೈವಸ್ಥಾನ ಆಡಳಿತ ಸಮಿತಿ, ವರ್ಕಾಡಿ ಬಿಜೆಪಿ ಮಂಡಲ ಸಮಿತಿ, ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಸಮಿತಿ, ಕೊರಗ ತನಿಯ ಸೇವಾ ಸಮಿತಿ ಮಂದ್ರೆಬೈಲ್ ವರ್ಕಾಡಿ ಸಂತಾಪ ಸೂಚಿಸಿದೆ.

RELATED NEWS

You cannot copy contents of this page