ಬಿಜೆಪಿ ವಿರೋಧದ ಮಧ್ಯೆ ಭಾಸ್ಕರನಗರ ಬಳಿ ಬಸ್ತಂ ಗುದಾಣಕ್ಕೆ ಕುಂಬಳೆ ಪಂ. ಆಡಳಿತ ಸಮಿತಿ ಗೊತ್ತುವಳಿ

ಕುಂಬಳೆ: ಭಾಸ್ಕರನಗರ ಬಳಿ ಬಸ್ ತಂಗುದಾಣ ಮಂಜೂರು ಮಾಡಬೇಕೆಂದು ಕುಂಬಳೆ ಪಂಚಾಯತ್ ಆಡಳಿತ ಸಮಿತಿ ಆರ್‌ಟಿಒರವರಲ್ಲಿ ಆಗ್ರಹಿಸಲು ತೀರ್ಮಾನಿಸಿದೆ. ಈ ಬಗ್ಗೆ ಮಂಡಿಸಿದ ಅಜೆಂಡಾಕ್ಕೆ ಅನುಕೂಲವಾಗಿ ಲೀಗ್ ಕಾಂಗ್ರೆಸ್, ಎಸ್‌ಡಿಪಿಐ, ಮಾರ್ಕಿಸ್ಟ್ ಸದಸ್ಯರು ಮತ ನೀಡಿದರು. ಆದರೆ ಬಿಜೆಪಿಯ ಏಳು ಸದಸ್ಯರೂ ಅದನ್ನು ವಿರೋಧಿಸಿದರು.  ಬಿಜೆಪಿಯ ಇಬ್ಬರು ಸದಸ್ಯರು ಸಭೆಯಲ್ಲಿ ಭಾಗವಹಿಸಿರಲಿಲ್ಲವೆಂದು ಹೇಳಲಾಗಿದೆ.

 ಪಂಚಾಯತ್ ಕುಂಬಳೆಯಲ್ಲಿ ಬಸ್ ನಿಲ್ದಾಣ, ಮೀನು ಮಾರುಕಟ್ಟೆ, ಟಾಯ್ಲೆಟ್, ಆಟೋ ಸ್ಟ್ಯಾಂಡ್, ಅನಧಿಕೃತ ಗೂಡಂಗಡಿಗಳ ಸಹಿತ ವಿವಿಧ ನಿರ್ಣಾಯಕ ಸಮಸ್ಯೆಗಳಲ್ಲಿ ಕ್ರಮ  ಕೈಗೊಳ್ಳಲು ಸಿದ್ಧವಾಗದ ಆಡಳಿತ ಸಮಿತಿ ಈ ವಿಷಯದಲ್ಲಿ ತೋರಿದ ಉತ್ಸಾಹ ಆಡಳಿತ   ಸಮಿತಿಯ ಪಕ್ಷಪಾತ ನೀತಿಯನ್ನು ಎತ್ತಿ ತೋರಿಸುತ್ತಿದೆಯೆಂದು ಬಿಜೆಪಿ ಪಂಚಾಯತ್ ಸಮಿತಿ ಆರೋಪಿಸಿದೆ. ಜನರಿಗೆ, ಪ್ರಯಾಣಿಕರಿಗೆ, ಬಸ್‌ಗಳಿಗೆ ಯಾವುದೇ ಫಲವಿಲ್ಲದ ಸ್ಥಳದಲ್ಲಿ ಪಂಚಾಯತ್ ಬಸ್  ತಂಗುದಾಣ ಮಂಜೂರು ಮಾಡಬೇಕೆಂದು ಆಗ್ರಹಿಸುವುದು ಯಾರ ಆಸಕ್ತಿ ಸಂರಕ್ಷಿಸಲು ಎಂದು ಜನರಿಗೆ ತಿಳಿದಿದೆಯೆಂದು ಬಿಜೆಪಿ ದೂರಿದೆ.

ಈಬಗ್ಗೆ ನಡೆದ ಸಭೆಯಲ್ಲಿ  ಬಿಜೆಪಿ ಪಂ. ಸಮಿತಿ ಅಧ್ಯಕ್ಷ ಕೆ. ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷೆ ಪ್ರೇಮಲತಾ ಎಸ್, ಕಾರ್ಯದರ್ಶಿ ಸುಧಾಕರ ಕಾಮತ್, ಪ್ರೇಮಾವತಿ, ವಿವೇಕಾನಂದ ಶೆಟ್ಟಿ, ವಿದ್ಯಾ ಎನ್ ಪೈ, ಪುಷ್ಪಲತಾ ಕಾಜೂರು, ಶಶಿ ಕುಂಬಳೆ ಮಾತನಾಡಿದರು.

RELATED NEWS

You cannot copy contents of this page