ಬಿದ್ದುಸಿಕ್ಕಿದ ಪರ್ಸ್ ಪೊಲೀಸರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಕುಂಬಳೆ: ಪ್ರಯಾಣ ವೇಳೆ ರಸ್ತೆ ಬದಿ ಬಿದ್ದು ಸಿಕ್ಕಿದ ಪರ್ಸ್‌ನ್ನು ಕುಂಬಳೆ ಪೊಲೀಸರಿಗೆ ತಲುಪಿಸಿ ಆಟೋ ಚಾಲಕ ಪ್ರಾಮಾಣಿಕತೆ ಮೆರೆದರು. ಬಂಬ್ರಾಣ ಬಯಲು ನಿವಾಸಿ ಕುಂಬಳೆಯಲ್ಲಿ ಆಟೋ ಚಾಲಕನಾದ ಪ್ರಸಾದ್ ಶೆಟ್ಟಿ ನಿನ್ನೆ ಆರಿಕ್ಕಾಡಿಗೆ ತೆರಳಿ ಮರಳುತ್ತಿದ್ದಾಗ ರಸ್ತೆ ಬದಿ ಅವರಿಗೆ ಪರ್ಸ್ ಬಿದ್ದುಸಿಕ್ಕಿತ್ತು. ಅದನ್ನು ತೆರೆದು ನೋಡಿದಾಗ ಹಣ, ಎಟಿಎಂ ಕಾರ್ಡ್‌ಗಳಿದ್ದವು. ಕೂಡಲೇ    ಕುಂಬಳೆ ಠಾಣೆಗೆ ತಲುಪಿ ಪೊಲೀಸರಿಗೆ ಪರ್ಸ್ ನೀಡಿದ್ದಾರೆ. ಬಳಿಕ ಪೊಲೀಸರು ನಡೆಸಿದ ತನಿಖೆಯಲ್ಲಿ ಪರ್ಸ್ ಎಡನಾಡಿನ ನವೀನ್ ಕುಮಾರ್ ಎಂಬವರದ್ದೆಂದು ತಿಳಿದು ಬಂದಿದೆ. ಇದರಿಂದ ಅವರನ್ನು ಠಾಣೆಗೆ ಕರೆಸಿ ಎಎಸ್‌ಐ ಪ್ರಸಾದ್ ಪರ್ಸ್ ಹಸ್ತಾಂತರಿಸಿದರು. ಆಟೋ ಚಾಲಕ ಪ್ರಸಾದ್ ಶೆಟ್ಟಿಯ ಪ್ರಾಮಾಣಿಕತೆ ಯನ್ನು ಪೊಲೀಸರು ಅಭಿನಂದಿಸಿದ್ದಾರೆ.

You cannot copy contents of this page