ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿ ಬಿದ್ದು ಸಿಕ್ಕಿದ ಹಣ ಒಳಗೊಂಡ ಪರ್ಸ್‌ನ್ನು ಅದರ ವಾರಸುದಾರನಿಗೆ ತಲುಪಿಸಿ ಅಧ್ಯಾಪಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಬದಿಯಡ್ಕದಲ್ಲಿ ನಿನ್ನೆ ಸಾರ್ವಜನಿಕ ಶ್ರೀ ಗಣೇಶೋ ತ್ಸವದ ವಿಗ್ರಹ ಜಲಸ್ತಂಭನಾ ಶೋಭಾ ಯಾತ್ರೆ ವೇಳೆ ಜನಜಂಗುಳಿ ಮಧ್ಯೆ ಹಣ ಒಳಗೊಂಡ ಪರ್ಸ್ ಬದಿಯಡ್ಕ ನವಜೀವನ ಪ್ರೌಢಶಾಲೆಯ ಅಧ್ಯಾಪಕ ರಾಜೇಶ್ ಮಾಸ್ತರ್ ಅಗಲ್ಪಾಡಿ ಅವರಿಗೆ ಲಭಿಸಿತ್ತು. ಪರ್ಸ್‌ನಲ್ಲಿ ೨೧ ಸಾವಿರ ರೂಪಾಯಿ ಹಾಗೂ ದಾಖಲೆ ಪತ್ರಗಳಿದ್ದವು. ಕೂಡಲೇ ವಾರಸುದಾರನಿಗಾಗಿ ಹುಡುಕಾಡಿದಾಗ ಪರ್ಸ್ ಸಲಾಂ ಬೀಜಂತ್ತಡ್ಕ ಎಂಬವರದ್ದೆಂದು ತಿಳಿದುಬಂದಿದೆ. ಇದರಂತೆ ಅವರನ್ನು ಬದಿಯಡ್ಕ ಸಂಪರ್ಕಿಸಿ ಪೊಲೀಸರ ಉಪಸ್ಥಿತಿಯಲ್ಲಿ ಪರ್ಸ್‌ನ್ನು ರಾಜೇಶ್ ಮಾಸ್ತರ್ ಅವರು ಸಲಾಂರಿಗೆ ಹಸ್ತಾಂತರಿಸಿ ದರು. ಮಾನವೀ ಯತೆ ಮೆರೆದ ರಾಜೇಶ್ ಮಾಸ್ತರ್‌ರಿಗೆ ಪೊಲೀಸರು ಹಾಗೂ ಸಲಾಂ ಬೀಜಂತ್ತಡ್ಕ ಕೃತಜ್ಞತೆ ಸಲ್ಲಿಸಿದರು.







