ಬಿದ್ದು ಸಿಕ್ಕಿದ ಹಣ ಒಳಗೊಂಡ  ಪರ್ಸ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕೂಲಿ ಕಾರ್ಮಿಕ

ಉಪ್ಪಳ: ಬಿದ್ದು ಸಿಕ್ಕಿದ ಹಣ ಒಳಗೊಂಡ ಪರ್ಸ್ ಹಿಂತಿರುಗಿಸಿ ಕೂಲಿ ಕಾರ್ಮಿಕ ಪ್ರಾಮಾಣಿಕತೆ ಮೆರೆದರು. ಪತ್ವಾಡಿ ನಿವಾಸಿ ಕೂಲಿ ಕಾರ್ಮಿಕ ಸಿದ್ದಿಕ್‌ರಿಗೆ  ಸೋಮವಾರ ಬೆಳಿಗ್ಗೆ  ಕೆಲಸಕ್ಕೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಪರ್ಸ್ ಬಿದ್ದು ಸಿಕ್ಕಿದೆ. ಅದರಲ್ಲಿ ೧೦,೫೦೦ ರೂ., ಆಧಾರ್ ಕಾರ್ಡ್, ಪಾನ್‌ಕಾರ್ಡ್  ಸಹಿತ ಹಲವು ದಾಖಲೆಗಳಿತ್ತು. ಅಂದು ಸಂಜೆ ಅವರು ವಾರೀಸುದಾರರಿಗೆ ಫೋನ್ ಮಾಡಿ ತಿಳಿಸಿದ್ದು, ನಿನ್ನೆ ಬೆಳಿಗ್ಗೆ ಪರ್ಸ್‌ನ್ನು ಹಿಂತಿರುಗಿಸಿದ್ದಾರೆ. ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್‌ನ ಉದ್ಯೋಗಿ ಸುರೇಶ್ ಶೆಟ್ಟಿ ಹೇರೂರು ಅವರ ಪರ್ಸ್ ಇದಾಗಿದ್ದು,  ಕೂಲಿ ಕಾರ್ಮಿಕನ  ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತವಾಗಿದೆ.

You cannot copy contents of this page