ಬಿಯರ್ ಬಾಟ್ಲಿಯಿಂದ ತಲೆಗೆ ಹಲ್ಲೆ : ಓರ್ವನ ವಿರುದ್ಧ ಕೇಸು ದಾಖಲು
ಸೀತಾಂಗೋಳಿ: ಬಿಯರ್ ಬಾಟ್ಲಿಯಿಂದ ಹೊಡೆದು ತಲೆಗೆ ಗಾಯಗೊಳಿಸಿರುವುದಾಗಿ ನೀಡಿದ ದೂರಿನಂತೆ ಓರ್ವನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಸೂರಂಬೈಲು ನಿವಾಸಿ ಅಜೇಶ್ (೩೭) ನೀಡಿದ ದೂರಿನಂತೆ ಧೀರಜ್ ಎಂಬಾತನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೊನ್ನೆ ರಾತ್ರಿ ಸೀತಾಂಗೋಳಿಯಲ್ಲಿ ಎರಡು ತಂಡಗಳ ಮಧ್ಯೆ ಘರ್ಷಣೆ ನಡೆಯುತ್ತಿದ್ದಾಗ ತಡೆಯಲು ಯತ್ನಿಸಿದ ವೇಳೆ ಅಜೇಶ್‌ರ ತಲೆಗೆ ಬಿಯರ್ ಬಾಟ್ಲಿಯಿಂದ ಹೊಡೆದಿದ್ದು, ಗಾಯಗೊಂಡ ಅವರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕೈಗೆ ಚಾಕುವಿನಿಂದ ಇರಿದಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.