ಬಿ.ಎಂ.ಎಸ್‌ನಿಂದ ಜ್ಯೋತಿಷ್ ಸಂಸ್ಮರಣೆ

ಕಾಸರಗೋಡು: ಬಿಎಂಎಸ್ ತಲೆಹೊರೆ ಕಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕರ್ತನಾಗಿದ್ದ ದಿ| ಜ್ಯೋತಿಷ್‌ರ ಸಂಸ್ಮರಣೆ ಹಾಗೂ ಪುಷ್ಪಾರ್ಚನೆ ಬಿಎಂಎಸ್ ಕಾಸರಗೋಡು ವಲಯ ಸಮಿತಿಯ ನೇತೃತ್ವದಲ್ಲಿ ಜರಗಿತು. ಜ್ಯೋತಿಷ್‌ರ ತಾಯಿ ರಾಜೀವಿ, ತಂದೆ ಗೋಪಾ ಲಕೃಷ್ಣ ಜಂಟಿಯಾಗಿ ದೀಪ ಬೆಳಗಿಸಿದರು. ಬಿಎಂಎಸ್ ರಾಜ್ಯ ಉಪಾಧ್ಯಕ್ಷ  ನ್ಯಾಯವಾದಿ ಪಿ. ಮುರಳೀಧರನ್ ಸಂಸ್ಮರಣೆ ನಡೆಸಿದರು. ಆರ್‌ಎಸ್‌ಎಸ್ ಜಿಲ್ಲಾ ಬೌದ್ಧಿಕ್ ಪ್ರಮುಖ್ ಅನಂ ತಪದ್ಮನಾಭ ಮಾತನಾಡಿದರು. ಬಿ.ಎಂ.ಎಸ್ ಜಿಲ್ಲಾ ಅಧ್ಯಕ್ಷ ಕೆ. ಉಪೇಂದ್ರನ್, ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ಜಿಲ್ಲಾ ಉಪಾಧ್ಯಕ್ಷ ಕೆ.ಎ. ಶ್ರೀನಿವಾಸನ್, ಪಿ. ದಿನೇಶ್, ವಲಯ ಪದಾಧಿಕಾರಿಗಳಾದ ಕಮಲಾಕ್ಷ ಪಿ, ರಿಜೇಶ್ ಜೆ.ಪಿನಗರ್, ಶಿವಪ್ರಸಾದ್ ತಾಳಿಪಡ್ಪು, ಪಿ. ರಮೇಶ್, ಎ. ಕೇಶವ, ರಾಹುಲ್ ಉದಯಗಿರಿ ಭಾಗವಹಿಸಿದರು. ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು.

RELATED NEWS

You cannot copy contents of this page