ಬಿ.ಎಂ.ಎಸ್.ನಿಂದ ಕುಂಬಳೆ, ಮಂಜೇಶ್ವರ ಪಂ. ಧರಣಿ
ಕುಂಬಳೆ: ಕೃಷಿ ಕಾರ್ಮಿಕರ ಅವ ಗಣನೆ, ಸರಕಾರದ ಕಾರ್ಮಿಕ ವಂಚನೆ ನೀತಿ ವಿರುದ್ಧ ರಾಜ್ಯದಾದ್ಯಂತ ಬಿಎಂಎಸ್ ನಡೆಸುವ ಮುಷ್ಕರದಂಗ ವಾಗಿ ಕುಂಬಳೆ, ಮಂಜೇಶ್ವರ ಪಂಚಾಯತ್ ಮುಂಭಾಗ ಧರಣಿ ಮುಷ್ಕರ ನಡೆಸಲಾಯಿತು.
೬೦ ವರ್ಷ ಪೂರ್ತಿಗೊಂಡ ಎಲ್ಲಾ ಕಾರ್ಮಿಕರಿಗೆ ಕನಿಷ್ಠ ೫೦೦೦ ರೂ. ಪಿಂಚಣಿ ನೀಡಬೇಕು, ಕೃಷಿ ಕ್ಷೇಮ ಬೋರ್ಡ್‌ನಿಂದ ಕ್ಷೇಮನಿಧಿ ಸೌಲಭ್ಯ ಸಮಯಾನುಸಾರ ನೀಡಬೇಕು, ಬಾಕಿ ಉಳಿದಿರುವ ಪಿಂಚಣಿ ಕೂಡಲೇ ವಿತರಿ ಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಧರಣಿ ನಡೆಸಲಾಯಿತು.
ಕುಂಬಳೆಯಲ್ಲಿ ಬಿಎಂಎಸ್ ರಾಜ್ಯ ಕಾರ್ಯದರ್ಶಿ ಸತ್ಯನಾಥನ್ ಉದ್ಘಾಟಿಸಿದರು. ಪಂ. ಸಮಿತಿ ಅಧ್ಯಕ್ಷ ಶಿವಾನಂದ ರಾವ್ ಕೆ. ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಮಾತನಾಡಿದರು. ಐತ್ತಪ್ಪ ನಾರಾಯಣ ಮಂಗಲ ಸ್ವಾಗತಿಸಿ, ಲೋಕೇಶ್ ಬಾಡೂರು ವಂದಿಸಿದರು. ರವಿರಾಜ, ಶಶಿಧರ, ವರದರಾಜ್, ವೇಣುಗೋಪಾಲ್ ಶೆಟ್ಟಿ, ಗಣೇಶ್ ನೇತೃತ್ವ ನೀಡಿದರು.
ಮಂಜೇಶ್ವರ ಪಂ. ಮುಂಭಾಗ ನಡೆದ ಧರಣಿಯನ್ನು ಜಿಲ್ಲಾ ಜೊತೆ ಕಾರ್ಯದರ್ಶಿ ಲೀಲಾಕೃಷ್ಣನ್ ಮುಳ್ಳೇರಿಯ ಉದ್ಘಾಟಿಸಿದರು. ಪಂ. ಸಮಿತಿ ಅಧ್ಯಕ್ಷ ರವಿ ಮಜಲ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ವಲಯ ಅಧ್ಯಕ್ಷ ರವಿ ಎಂ.ಕೆ. ಶುಭ ಕೋರಿದರು. ವಲಯ ಪದಾಧಿಕಾರಿಗಳಾದ ಭಾಸ್ಕರ ಬಿ.ಎಂ, ಶ್ರೀಧರ, ಬಿ.ಎಂ. ರೋಹಿತ್ ಮಜಿಬೈಲ್, ನವೀನ ಕಣ್ವತೀರ್ಥ, ರಾಘವ ಕುಂಜತ್ತೂರು ಭಾಗವಹಿಸಿದರು. ಪಂ. ಸಮಿತಿ ಕಾರ್ಯದರ್ಶಿ ಕೆ.ಪಿ. ಪ್ರಕಾಶ್ ಸ್ವಾಗತಿಸಿ, ರವಿ ಮಜಲ್ ವಂದಿಸಿದರು.