ಬೀಗ ಹಾಕಿದ್ದ ಮನೆಯಿಂದ ನಗದು ಕಳವು

ಉಪ್ಪಳ: ಜನವಾಸವಿಲ್ಲದ ಬೀಗ ಹಾಕಿದ ಮನೆಯ ಬಾಗಿಲು ಮುರಿದು ಕಳವು ನಡೆಸಿದ ಬಗ್ಗೆ ಮಂಜೇಶ್ವರ ಠಾಣೆಗೆ ದೂರು ನೀಡಲಾಗಿದೆ. ಉಪ್ಪಳ ಗೇಟ್ ಬಳಿಯ ಫಾತಿಮರ ಮನೆಯ ಮುಂಭಾಗದ ಬಾಗಿಲ ಬೀಗ ಮುರಿದು ಒಳನುಗ್ಗಿ ಕಪಾಟಿನಲ್ಲಿದ್ದ ೫೦೦೦ ರೂ. ಕಳವು ನಡೆಸಲಾಗಿದೆ. ಈ ತಿಂಗಳ ೧೩ರಂದ ರಾತ್ರಿಯಿಂದ ಮರುದಿನ ಬೆಳಗ್ಗಿನ ಮಧ್ಯೆ ಕಳವು ನಡೆದಿರಬೇಕೆಂದು ಶಂಕಿಸಲಾಗಿದೆ. ಈ ಮನೆಯ  ಮಾಲಕಿ ಕುಟುಂಬ ಸಹಿತ ಕೊಲ್ಲಿಯಲ್ಲಿದ್ದು  ಮನೆಯನ್ನು ಸಹೋದರ ಮೊಹಮ್ಮದ್ ಹಂಸರ ನೇತೃತ್ವದಲ್ಲಿ ದುರಸ್ತಿ ನಡೆಸಲಾಗುತ್ತಿದೆ. ಶನಿವಾರವೂ ಇಲ್ಲಿ ಕೆಲಸ ನಡೆಸಲಾಗಿದ್ದು, ಮರುದಿನ ಬೆಳಿಗ್ಗೆ ಕೆಲಸಕ್ಕೆಂದು ತಲುಪಿ ನೋಡುವಾಗ ಬೀಗ ಮುರಿದು ಕಳವು ನಡೆಸಿದ್ದು ತಿಳಿದುಬಂದಿದೆ. ಈ ಬಗ್ಗೆ ಮೊಹ ಮ್ಮದ್ ಹಂಸ ದೂರು ನೀಡಿದ್ದು, ಪೊಲೀಸರು ಕೇಸು ದಾಖಲಿಸಿ ಸ್ಥಳಕ್ಕೆ ತಲುಪಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page