ಬೆಂಗಳೂರಿನಲ್ಲಿ ಕೇರಳೀಯ ಕುಟುಂಬಕ್ಕೆ ಆಕ್ರಮಣ: 5ರ ಬಾಲಕನಿಗೆ ಗಾಯ
ಬೆಂಗಳೂರು: ಕಾರಿನಲ್ಲಿ ಬೆಂಗಳೂರಿನಲ್ಲಿ ಸಂಚರಿಸುತ್ತಿದ್ದ ಕೇರಳೀಯ ಕುಟುಂಬದ ವಿರುದ್ಧ ಆಕ್ರಮಣ ನಡೆಸಲಾಗಿದೆ. ಕಾರಿನ ಗಾಜನ್ನು ಕಲ್ಲೆಸೆದು ಹಾನಿಗೊಳಿಸಿ ಒಳಗಿದ್ದ ಐದು ವರ್ಷದ ಬಾಲಕನ ತಲೆಗೆ ಗಾಯವುಂಟಾಗಿದೆ. ಬುಧವಾರ ರಾತ್ರಿ ಕಸವನಹಳ್ಳಿ ಸಮೀಪ ಘಟನೆ ನಡೆದಿದೆ.ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಕೋಟ್ಟಯಂ ಪಾಲಾ ನಿವಾಸಿ ಅನೂಪ್ ಜೋರ್ಜ್‌ನ ಕಾರಿಗೆ ಆಕ್ರಮಣ ಎಸಗಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸರು ಕೇಸು ದಾಖಲಿಸಿದ್ದಾರೆ.