ಬೆಳ್ಳೂರು ಲಕ್ಷದೀಪೋತ್ಸವ: ಆಮಂತ್ರಣಪತ್ರಿಕೆ ಬಿಡುಗಡೆ

ಮುಳ್ಳೇರಿಯ: ಅಯೋಧ್ಯೆ ಯಲ್ಲಿ ಶ್ರೀರಾಮ ದೇವಾಲಯದಲ್ಲಿ ದೇವರ ಪ್ರತಿಷ್ಠೆ ನಡೆಯುವ ಜ. ೨೨ರಂದು ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರ ದಲ್ಲಿ ಲಕ್ಷದೀಪೋತ್ಸವ ಹಮ್ಮಿಕೊಂಡಿ ರುವುದು ಉತ್ತಮವಾಗಿ ದೆಯೆಂದು ಉದ್ಯಮಿ ಗೋಪಾಲಕೃಷ್ಣ ಪೈ ಅಭಿಪ್ರಾಯಪಟ್ಟರು. ಕ್ಷೇತ್ರದಲ್ಲಿ ಕ್ಷೇತ್ರ ಆಡಳಿತ ಸಮಿತಿ, ಭಕ್ತವೃಂದ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮದ್ವಾಧೀಶ ರಾಮಕೃಷ್ಣ ಕಾಟುಕುಕ್ಕೆ ಶಿಷವೃಂದ ಜಂಟಿ ಆಶ್ರಯದಲ್ಲಿ ನಡೆಯಲಿರುವ ಲಕ್ಷ ದೀಪೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಜ್ಯೋತಿಷಿ ಉಣ್ಣಿಕೃಷ್ಣನ್‌ರಿಗೆ ಆಮಂ ತ್ರಣಪತ್ರಿಕೆ ನೀಡಿ ಬಿಡುಗಡೆಗೊಳಿಸಲಾ ಯಿತು. ಲಕ್ಷದೀಪೋತ್ಸವ ಸಮಿತಿ  ಅಧ್ಯಕ್ಷ  ಶ್ರೀಧರ  ಎಂ ಅಧ್ಯಕ್ಷತೆ ವಹಿಸಿದರು. ಕ್ಷೇತ್ರದ ಗಂಗಾಧರ ಬಲ್ಲಾಳ್, ಕಲ್ಲಗ ಚಂದ್ರಶೇಖರ ರಾವ್, ಹರೇಕೃಷ್ಣ ಪುತ್ತೂರು, ಹರೀಶ್ ಗೋಸಾಡ, ಅಖಿಲೇಶ್ ನಗುಮುಗಂ, ವೆಂಕಟಕೃಷ್ಣ ಕಡಂಬಳಿತ್ತಾಯ, ಸಂತೋಷ್ ರೈ  ಗಾಡಿಗುಡ್ಡೆ, ಜಯಾನಂದ ಕುಳ, ರಾಘವೇಂದ್ರ ಎಸ್ ಉಪಸ್ಥಿತರಿದ್ದು. ಡಾ| ಮೋಹನ್ ದಾಸ್ ರೈ ಸ್ವಾಗತಿಸಿ, ಪ್ರದೀಪ್ ಕುಮಾರ್ ಪಿ ಬೆಳ್ಳೂರು ವಂದಿಸಿದರು. ಚಂದ್ರ ಶೇಖರ ಆಚಾರ್ಯ  ನಿರೂಪಿಸಿದರು.

RELATED NEWS

You cannot copy contents of this page