ಬೇಳ ಪಬ್ಲಿಕ್ ವೆಲ್ಫೇರ್ ಸಹಕಾರಿ ಸೊಸೈಟಿ ವಾರ್ಷಿಕ ಮಹಾಸಭೆ

ನೀರ್ಚಾಲು: ಬೇಳ ಪಬ್ಲಿಕ್ ವೆಲ್ಫೇರ್ ಸಹಕಾರಿ ಸೊಸೈಟಿಯ ವಾರ್ಷಿಕ ಮಹಾಸಭೆ ಸೊಸೈಟಿಯ ಕಾರ್ಯಾಲಯದಲ್ಲಿ ಇತ್ತೀಚೆಗೆ ನಡೆಯಿತು. ಸೊಸೈಟಿಯ ಅಧ್ಯಕ್ಷೆ ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನ ಮೊಂತೇರೊ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ದೇವಾಲಯ ಧರ್ಮ ಗುರುಗಳಾದ ವಂ| ಫಾ| ಎಡ್ವಿನ್ ಪ್ರಾನ್ಸಿಸ್ ಪಿಂಟೋ ಉಪಸ್ಥಿತರಿದ್ದÄ ಮÁತನಾಡಿ, ಸಂಸ್ಥೆಯು ಸಾಧಿಸಿದ ಪ್ರಗತಿಯ ಕುರಿತು ಪ್ರಸಂಶೆ ವ್ಯಕ್ತಪಡಿಸಿದರು. ಸಂಘದ ಕಾರ್ಯದರ್ಶಿ ಜಾಸ್ಮಿನ್ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ವಿಲ್ಪೆಡ್ ಮನೋಹರ್, ರಿಚಾರ್ಡ್ ಕ್ರಾಸ್ತಾ,ಶ್ರೀ ಅಲ್ಪೋನ್ ಕಯ್ಯಾರ್ ವಿವಿಧ ಲೆಕ್ಕ ಪತ್ರಗಳನ್ನು ಮಂಡಿಸಿದರು. ವಂ| ಧರ್ಮ ಗುರುಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸ ಲಾಯಿತು. ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಅಡ್ವ.
ಥೋಮಸ್ ಡಿಸೋಜ ಸ್ವಾಗತಿಸಿ, ನಿರ್ದೇಶಕ ರಾಜು ಜೋನ್ ಡಿಸೋಜ ಮಣಿಯಂಪಾರೆ ವಂದಿಸಿದರು .ಸಂಸ್ಥೆಯ ನಿರ್ದೇಶಕ ಸ್ಟ್ಯಾನಿಲೋಬೊ ಕೊಲ್ಲಂಗಾನ ನಿರೂಪಿಸಿದರು.

You cannot copy contents of this page