ಬೇಸಿಗೆ ಮಳೆ : ಮೊಗ್ರಾಲ್ನಲ್ಲಿ ಕುಸಿದ ಬಾವಿ
ಮೊಗ್ರಾಲ್: ಒಂದು ವಾರದಿಂದ ಸುರಿದ ಮಳೆಗೆ ಮೊಗ್ರಾಲ್ನಲ್ಲಿ ಬಾವಿ ಕುಸಿದು ಕುಡಿಯುವ ನೀರಿಗೆ ಸಮಸ್ಯೆಯಾಯಿತು. ಬಾವಿಯ ಹತ್ತಿರವೇ ಇದ್ದ ಅಡುಗೆ ಕೊಠಡಿ ಭಾಗವೂ ಕುಸಿದಿದೆ.
ಮೊಗ್ರಾಲ್ ಮಿಲಾದ್ ನಗರದ ಮೊಗ್ರಾಲ್ ದೇಶೀಯವೇದಿ ಜೊತೆ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಕುಂಞಿಯವರು ಮಾಲಕತ್ವದಲ್ಲಿರುವ ಮನೆಯ ಅಡುಗೆ ಕೊಠಡಿ, ಬಾವಿ ತೀವ್ರ ಮಳೆಗೆ ಹಾನಿಗೊಂಡಿದೆ. ಈ ಬಗ್ಗೆ ಕುಂಬಳೆ ಕಂದಾಯ ಅಧಿಕಾರಿಗಳಿಗೆ ತಿಳಿಸಲಾಗಿದೆ.