ಬೈಕ್‌ನಲ್ಲಿ ಸಾಗಿಸುತ್ತಿದ್ದ ಎರಡು ಕಿಲೋ ಗಾಂಜಾ ವಶ: ಇಬ್ಬರ ಸೆರೆ
ಕಾಸರಗೋಡು: ಬೈಕ್‌ನಲ್ಲಿ ಸಾಗಿಸುತ್ತಿದ್ದ ಎರಡು ಕಿಲೋ ಗಾಂಜಾದೊಂದಿಗೆ ಚಂದೇರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಪಡನ್ನ ಕೈಪಾಟಿಯ ಟಿ. ರಾತ್ತಿಕ್ (52) ಮತ್ತು ಪಡನ್ನ ತೆಕ್ಕೇಪುರದ ನೂರ್ ಮುಹಮ್ಮದ್ (42) ಬಂಧಿತರಾದ ಆರೋಪಿ ಗಳು. ಪಡನ್ನ ಬ್ಯಾಂಕ್ ಜಂಕ್ಷನ್ ಬಳಿ ಚಂದೇರ ಪೊಲೀಸ್ ಠಾಣೆ ಎಸ್‌ಐ ಕೆ.ಪಿ. ಸತೀಶ್‌ರ ನೇತೃತ್ವದ ಪೊಲೀಸರ ತಂಡ ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಆ ದಾರಿಯಾಗಿ ಆರೋಪಿ ಗಳು ಬಂದ ಬೈಕ್‌ನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ, ಅದರಲ್ಲಿ ,1. 995 ಕಿಲೋ ಗಾಂಜಾ ಪತ್ತೆಯಾಗಿದೆ. ತಕ್ಷಣ ಪೊಲೀಸರು ಗಾಂಜಾ ಸಹಿತ ಅವರಿಬ್ಬರನ್ನೂ ಬಂಧಿಸಿದ್ದಾರೆ. ಬೈಕನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.