ಬೈಕ್ ಢಿಕ್ಕಿ ಹೊಡೆದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತ್ಯು

ಮಂಜೇಶ್ವರ: ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿಹೊಡೆದು ಚಿಕಿತ್ಸೆಯಲ್ಲಿದ್ದ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ. ಹೊಸಂಗಡಿ ಎ.ಕೆ.ಜಿ ಮಂದಿರ ಬಳಿಯ ನಿವಾಸಿ ವಿಶ್ವನಾಥ ಶೆಟ್ಟಿಗಾರ್ [67] ಮೃತಪಟ್ಟವರು. ಈ ತಿಂಗಳ 10 ರಂದು ಸಂಜೆ 7ಗಂಟೆಗೆ ಅಂಗಡಿಪದವುನಲ್ಲಿ ರಸ್ತೆ ದಾಟುತ್ತಿದ್ದಾಗ ಕಡಂಬಾರ್ ಭಾಗದಿಂದ ಹೊಸಂಗಡಿ ಭಾಗಕ್ಕೆ ತೆರಳುತ್ತಿದ್ದ ಬೈಕ್ ಡಿಕ್ಕಿಹೊಡೆದಿದ್ದು, ಇದರಿಂದ ಗಂಭೀರ ಗಾಯಗೊಂಡ ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶನಿವಾರ ರಾತ್ರಿ ಮೃತಪಟ್ಟರು. ಇವರು ಈ ಹಿಂದೆ ಹಲವು ವರ್ಷಗಳ ಕಾಲ ಹೊಸಂಗಡಿಯಲ್ಲಿ ಪತ್ರಿಕೆ ವಿತರಕರಾಗಿದ್ದರು. ಮಂಜೇಶ್ವರ ಪೊಲೀಸರು ಬೈಕ್ ಸವಾರನ ವಿರುದ್ದ ಕೇಸು ದಾಖಲಿಸಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ರಾಮತ್ತಮಜಲ್ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಸAಸ್ಕಾರ ನಡೆಯಿತು. ಮೃತರು ಪತ್ನಿ ಉಮಾವತಿ, ಸಹೋದರ ಲಿಂಗಪ್ಪ ಶೆಟ್ಟಿಗಾರ್, ಸಹೋದರಿ ಸೀತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ ವಾಮನ ಶೆಟ್ಟಿಗಾರ್ ತಾಯಿ ಲಕ್ಷಿ÷್ಮÃ ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page