ಬೋವಿಕಾನ ಶಾಲೆಯ ಪ್ಲಸ್‌ಟು ಅಧ್ಯಾಪಿಕೆ ನಿಧನ
ಬೋವಿಕ್ಕಾನ: ಇಲ್ಲಿನ ಬಿಎಆರ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ಅಧ್ಯಾಪಿಕೆ ಹೃದಯಾಘಾತದಿಂದ ನಿಧನ ಹೊಂದಿದರು. ಕಣ್ಣೂರು ಪಳ್ಳಿಕುನ್ ನಿವಾಸಿ ಎಂ. ಪ್ರೀತಾ (54) ಮೃತಪಟ್ಟವರು. ಇಕಾನಾಮಿಕ್ಸ್ ವಿಭಾಗ ಅಧ್ಯಾಪಿಕೆಯಾಗಿ ದ್ದಾರೆ. ನಿನ್ನೆ ರಾತ್ರಿ ಅಣಂಗೂರಿನಲ್ಲಿ ವಾಸ ಸ್ಥಳದಲ್ಲಿ ಅಸ್ವಸ್ಥತೆ ಕಂಡುಬಂದ ಹಿನ್ನೆಲೆಯಲ್ಲಿ ವಿದ್ಯಾನಗರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಆ ವೇಳೆಗೆ ಮೃತಪಟ್ಟಿ ದ್ದಾರೆ. ಇಂದು ಬೆಳಿಗ್ಗೆ ಬೋವಿಕ್ಕಾನ ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕಿರಿ ಸಲಾಯಿತು. ಬಳಿಕ ಪಳ್ಳಿಕುನ್ನಿನ ಮನೆಗೆ ಮೃತದೇಹವನ್ನು ಕೊಡೊಯ್ಯ ಲಾಗುವುದು. ಮೃತರು ಪತಿ ವಿ. ಪ್ರಶಾಂತ್ (ನಿವೃತ್ತ ಮುಖ್ಯೋಪಾ ಧ್ಯಾಯ), ಪುತ್ರ ಅಭಿಜಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.