ಬೋವಿಕ್ಕಾನದಲ್ಲಿ ದೌರ್ಜನ್ಯ: ೧೭ರ ಹರೆಯದ ಬಾಲಕಿ ಮಗುವಿಗೆ ಜನ್ಮ ನೀಡಿದ ಪ್ರಕರಣ ಆದೂರು ಠಾಣೆಗೆ ಹಸ್ತಾಂತರ
ಮುಳ್ಳೇರಿಯ: ಅಪ್ರಾಪ್ತೆ ಮಗುವಿಗೆ ಜನ್ಮ ನೀಡಿದ ಘಟನೆಯಲ್ಲಿ ಬದಿಯಡ್ಕ ಪೊಲೀಸರು ದಾಖಲಿಸಿದ ಪೋಕ್ಸೋ ಪ್ರಕರಣವನ್ನು ಆದೂರು ಠಾಣೆಗೆ ಹಸ್ತಾಂತರಿಸಿದರು. ಬಾಲಕಿಗೆ ದೌರ್ಜನ್ಯಗೈದಿರುವುದು ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೋವಿಕ್ಕಾನದಲ್ಲಿ ಆದುದರಿಂದ ಈ ಕೇಸನ್ನು ಆದೂರು ಠಾಣೆಗೆ ಹಸ್ತಾಂತರಿ ಸಲಾಗಿದೆ. ಪ್ರಕರಣದಲ್ಲಿ ಈಶ್ವರಮಂ ಗಲ ನಿವಾಸಿಯಾದ ೨೨ರ ಹರೆಯದ ಯುವಕ ಆರೋಪಿಯಾಗಿದ್ದಾನೆ. ಈತ ಹಾಗೂ ೧೭ರ ಹರೆಯದ ಬಾಲಕಿ ಈ ಮೊದಲು ಪ್ರೀತಿಸುತ್ತಿದ್ದ ರೆನ್ನಲಾಗಿದೆ. ಈ ಸಂಬಂಧವನ್ನು ಎರಡೂ ಮನೆಯವರು ಅಂಗೀಕರಿ ಸಲು ಸಿದ್ಧರಾಗದ ಹಿನ್ನೆಲೆಯಲ್ಲಿ ಇವರಿ ಬ್ಬರು ಪರಾರಿಯಾಗಿ ದಂಪತಿಯಂತೆ ಜೀವಿಸುತ್ತಿದ್ದರು. ಬೋವಿಕ್ಕಾನದ ಬಾಡಿಗೆ ಕೊಠಡಿಯಲ್ಲಿ ಇವರು ವಾಸಿಸುತ್ತಿದ್ದರು. ಈ ಮಧ್ಯೆ ಬಾಲಕಿ ಗರ್ಭಿಣಿಯಾಗಿದ್ದಾಳೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಂದು ತಿಂಗಳ ಹಿಂದೆ ಹೆರಿಗೆ ನಡೆದಾಗ ಬಾಲಕಿಗೆ ಪ್ರಾಯಪೂರ್ತಿಯಾಗಿಲ್ಲವೆಂಬ ವಿಷಯ ತಿಳಿದುಬಂದಿದೆ. ಈ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು ಬದಿಯಡ್ಕ ಪೊಲೀಸರಿಗೆ ತಿಳಿಸಿದ್ದು, ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಲಾ ಗಿತ್ತು. ಆದರೆ ಬಾಲಕಿ ಬದಿಯಡ್ಕ ಠಾಣಾ ವ್ಯಾಪ್ತಿಯ ನಿವಾಸಿಯಾಗಿ ದ್ದರ ದೌರ್ಜನ್ಯ ನಡೆದಿರುವುದು ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಲ್ಲಾಗಿದೆ. ಈ ವಿಷಯವನ್ನು ಗಣನೆಗೆ ತೆಗೆದುಕೊಂಡು ಪ್ರಕರಣವನ್ನು ಆದೂ ರು ಠಾಣೆಗೆ ಹಸ್ತಾಂತರಿಸಲಾಗಿದೆ.