ಬೋವಿಕ್ಕಾನ ಎಯುಪಿ ಶಾಲೆಯಲ್ಲಿ ಪುಸ್ತಕಕ್ಕೆ ಸಮಾಜದ್ರೋಹಿಗಳಿಂದ ಬೆಂಕಿ

ಬೋವಿಕ್ಕಾನ: ಇಲ್ಲಿನ ಎಯುಪಿ ಶಾಲೆಯಲ್ಲಿ ಸಮಾಜದ್ರೋಹಿಗಳು ಪುಸ್ತಕವನ್ನು ಕಿಚ್ಚಿರಿಸಿ ನಾಶಪಡಿಸಿದ್ದಾರೆ. 200ಕ್ಕಿಂತಲೂ ಹೆಚ್ಚು ಪುಸ್ತಕಗಳು ಹಾಗೂ ಶುಚೀಕರಣ ಸಾಮಗ್ರಿಗಳನ್ನು ಬೆಂಕಿ ಹಚ್ಚಿ ನಾಶಪಡಿಸಲಾಗಿದೆ. ನಿನ್ನೆ ಬೆಳಿಗ್ಗೆ ಶಾಲೆ ತೆರೆದಾಗ ಸಮಾಜದ್ರೋಹಿಗಳ ಈ ಕಾರ್ಯ ಕಂಡು ಬಂದಿದೆ. ಪ್ರೀಪ್ರೈಮರಿ ವಿಭಾಗ ಕಾರ್ಯಾಚರಿಸುವ ತರಗತಿ ಕೊಠಡಿಯಲ್ಲಿ ಪುಸ್ತಕ ಉರಿಸಿರುವುದು ಕಂಡು ಬಂದಿದೆ. ಬಾಗಿಲು ಮುಚ್ಚಿದ್ದರೂ  ಹೊರಗಿನಿಂದ ಕಿಟಿಕಿ ಮೂಲಕ ಒಳಗೆ ಬೆಂಕಿ ಹಚ್ಚಿರಬೇಕೆಂದು ಶಂಕಿಸಲಾ ಗಿದೆ. ಇದರಿಂದ ಬೆಂಚುಗಳಿಗೂ ಹಾನಿಯುಂಟಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page