ಭಜನಾ ಮಂದಿರದ ವಿಗ್ರಹದಿಂದ ಚಿನ್ನದ ಸರ ತೆಗೆದು ನಕಲಿ ಸರ ತೊಡಿಸಿದ ಆರೋಪಿ ಸೆರೆ
ಕಾಸರಗೋಡು: ಕೂಡ್ಲು ಪಾರೆಕಟ್ಟೆ ಶಾಸ್ತಾನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಿಗ್ರಹಕ್ಕೆ ತೊಡಗಿಸಿದ್ದ 2,60,000 ರೂ. ಮೌಲ್ಯದ ನಾಲ್ಕು ಪವನ್‌ನ ಚಿನ್ನದ ಸರ ತೆಗೆದು ನಕಲಿ ಚಿನ್ನದ ಸರ ತೊಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಸ್ತುತ ಭಜನಾ ಮಂದಿರದ ಮಾಜಿ ಕಾರ್ಯದರ್ಶಿ ಕೂಡ್ಲು ರಾಮದಾಸನಗರ ಹೊಸ ಮನೆ ರಸ್ತೆ ನಂದಗೋಕುಲದ ದಯಾನಂದ ಶೆಟ್ಟಿ (43)ಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನಂತರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಪ್ರಸ್ತುತ ಭಜನಾ ಮಂದಿರದ ಅಧ್ಯಕ್ಷರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜನವರಿ 30ರ ಮೊದಲು ವಿಗ್ರಹದ ಚಿನ್ನದ ಸರ ತೆಗೆದು ಅದಕ್ಕೆ ನಕಲಿ ಸರ ತೊಡಿಸಲಾಗಿತ್ತೆಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ಆರೋಪಿಸಲಾಗಿದೆ.