ಭಜನಾ ಸಂಕೀರ್ತನೆಕಾರ ನಿಧನ
ಮುಳ್ಳೇರಿಯ: ಆದೂರು ಕೊಯಂಕೂಡ್ಲು ನಿವಾಸಿ ಅರಿಯಡ್ಕಗುತ್ತು ಗೋಪಾಲಕೃಷ್ಣ ರೈ (80) ನಿಧನ ಹೊಂದಿದರು. ಆದೂರು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಭಜನಾ ಸಂಘದ ಅಧ್ಯಕ್ಷರಾಗಿದ್ದರು. ಭಜನಾ ಸಂಕೀರ್ತನಾಕಾರರಾಗಿದ್ದರು. ಮೃತರು ಪತ್ನಿ ಎ. ಚಂದ್ರಾವತಿ, ಮಕ್ಕಳಾದ ಚಿತ್ರಲೇಖ, ಲಕ್ಷ್ಮಿರತ್ನ, ಪ್ರಶಾಂತ್ ಕುಮಾರ್ ಎ, ಪ್ರಸಂಧ್ಯ ಕುಮಾರಿ, ಪ್ರಸನ್ನ ಕುಮಾರ ಎ, ಅಳಿಯಂದಿರಾದ ಧನಂಜಯ ಆದೂರು, ಡಾ. ಶಿವಪ್ರಸಾದ್ ಎನ್.ಕೆ. ನೆಲ್ಲಿಕುಂಜೆ, ಹರೀಶ ಉಡುಪಿ, ಸೊಸೆ ಶರಣ್ಯ ನಾರಾಯಣ ಪನತ್ತಡಿ, ಸಹೋದರ- ಸಹೋದರಿಯರಾದ ಅಜಿತ್ ಕುಮಾರ್ ರೈ, ಸುದರ್ಶನ ರೈ, ಸುಭಾಷಿಣಿ ಶೆಟ್ಟಿ, ಶಕುಂತಳ ರೈ, ನಾಗವೇಣಿ ರೈ, ಶ್ರೀದೇವಿ ರೈ, ಸಂಧ್ಯಾ ಶೆಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.