ಭಾರತೀಯ ಅಭಿಭಾಷಕ ಪರಿಷತ್‌ನಿಂದ ಮಹಿಳಾ ದಿನಾಚರಣೆ
ಕಾಸರಗೋಡು: ಭಾರತೀಯ ಅಭಿಭಾಷಕ ಪರಿಷತ್ ಜಿಲ್ಲಾ ಸಮಿತಿ ಆಶ್ರಯದಲ್ಲಿ ಮಹಿಳಾ ದಿನಾಚರಣೆ ನಡೆಸಲಾಯಿತು. ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಉದ್ಘಾಟಿಸಿದರು. ಜಿಲ್ಲಾ ಮಹಿಳಾ ಪ್ರಮುಖ್ ನ್ಯಾಯವಾದಿ ಕೆ.ಎಂ. ಬೀನಾ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್, ನ್ಯಾಯವಾದಿಗಳಾದ ಚೈತ್ರ, ಚೈತನ್ಯ ಎಂಬಿವರು ಮಾತನಾಡಿದರು. ಕಾಸರಗೋಡು ಘಟಕ ಕಾರ್ಯದರ್ಶಿ ನ್ಯಾಯವಾದಿ ಜಾಹ್ನವಿ ಸ್ವಾಗತಿಸಿ, ಸಂಗೀತ ವಂದಿಸಿದರು.