ಭಾರತೀಯ ನ್ಯಾಯಸಂಹಿತೆ ಪ್ರಕಾರ ಜಿಲ್ಲೆಯಲ್ಲಿ ಮೊದಲ ಕೇಸು ಅಂಬಲತ್ತರದಲ್ಲಿ ದಾಖಲು

ಕಾಸರಗೋಡು: ಭಾರತೀಯ ನ್ಯಾಯಸಂಹಿತೆ ಪ್ರಕಾರ ಕಾಸರಗೋಡು ಜಿಲ್ಲೆಯ ಮೊದಲ ಪ್ರಕರಣ ಅಸಹಜ ಸಾವಿಗೆ ಸಂಬಂಧಿಸಿ ದಾಖಲಿಸಲಾಗಿದೆ. ಅಂಬಲತ್ತರ ಪೊಲೀಸ್ ಠಾಣೆಯಲ್ಲಿ ಈ ಕೇಸು ದಾಖಲಿಸ ಲಾಗಿದೆ. ಅಂಬಲತ್ತರ ಬೇಳೂರು ತಟ್ಟುಮ್ಮಲ್‌ನಲ್ಲಿ ಮನೆಯಲ್ಲಿ ಆಗ್ರೋ ಇಂಡಸ್ಟ್ರಿಯಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಿಹಾರ ನಿವಾಸಿ ಪ್ರಭುರಾಂ (50) ಎಂಬವರ ಸಾವಿಗೆ ಸಂಬಂಧಿಸಿ ಕೇಸು ದಾಖಲಿಸಿಕೊಳ್ಳಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ ಎಸ್‌ಎಸ್) 194 ಪ್ರಕಾರ ಪೊಲೀಸು ಈ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಮುಂಜಾನೆ 12.30ರ ವೇಳೆ ಇವರು ಮೃತಪಟ್ಟಿದ್ದರು.

ಮುಂಜಾನೆ ಕಂಪೆನಿಯ ಕ್ವಾರ್ಟರ್ಸ್‌ನಲ್ಲಿ ವಾಂತಿ ಮಾಡಿದ ಪ್ರಭುರಾಂ ಅನಂತರ ನಿದ್ರಿಸಿದ್ದರು. ಮುಂಜಾನೆ 1 ಗಂಟೆ ವೇಳೆ ಕೊಠಡಿಯ ಲ್ಲಿದ್ದವರು ಎಬ್ಬಿಸಲು ಯತ್ನಿಸಿದರೂ ಪ್ರಭುರಾಂ ಏಳಲಿಲ್ಲ.

Leave a Reply

Your email address will not be published. Required fields are marked *

You cannot copy content of this page