ಭಾಸ್ಕರ ರೈ ಕುಕ್ಕುವಳ್ಳಿಯವರಿಗೆ ಹುಟ್ಟೂರ ಸನ್ಮಾನ ನಾಳೆ
ಪುತ್ತೂರು: ನಿವೃತ್ತ ಅಧ್ಯಾಪಕ, ಅರ್ಥದಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರಿಗೆ ನಾಳೆ ಬೆಟ್ಟಂಪಾಡಿಯಲ್ಲಿ ಹುಟ್ಟೂರ ಸನ್ಮಾನ ನಡೆಯಲಿದೆ. ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವ ಸಂದರ್ಭದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಾಳೆ ಬೆಳಿಗ್ಗೆ 10ಕ್ಕೆ ಜರಗುವ ಕಾರ್ಯಕ್ರಮದಲ್ಲಿ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಅಧ್ಯಕ್ಷತೆ ವಹಿಸುವರು. ಡಾ. ಹರಿಕೃಷ್ಣ ಪಾಣಾಜೆ, ಡಿ.ಎಂ. ಬಾಲಕೃಷ್ಣ ಭಟ್ ಘಾಟಿ, ಪ್ರಗತಿಪರ ಕೃಷಿಕ ಎಂ. ಮುತ್ತಣ್ಣ ಶೆಟ್ಟಿ ಚೆಲ್ಮಡ್ಕ ಅತಿಥಿಗಳಾಗಿರುವರು. ಇದೇ ವೇಳೆ ನಿವೃತ್ತ ಅಧ್ಯಾಪಕ ನಾರಾಯಣ ಭಟ್ ಕುಂಚಿನಡ್ಕ, ಜನಾರ್ದನ ರಾವ್ ಬೆಟ್ಟಂಪಾಡಿಯವರನ್ನು ಸನ್ಮಾನಿಸಲಾಗುವುದು. ಬಳಿಕ ತಾಳಮದ್ದಳೆ, ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.