ಮಂಜಕ್ಕಲ್‌ನಲ್ಲಿ ಗೂಡಿನಲ್ಲಿದ್ದ ನಾಯಿಯನ್ನು ಕೊಂದು ತಿಂದ ಚಿರತೆ: ಸ್ಥಳೀಯರಲ್ಲಿ ಭೀತಿ
ಮುಳಿಯಾರು: ಈ ಪರಿಸರದಲ್ಲಿ ಭೀತಿ ಸೃಷ್ಟಿಸಿ ಮತ್ತೆ ಚಿರತೆ ದಾಳಿ ನಡೆಸಿದೆ. ಮಂಜಕ್ಕಲ್ ತಾಯತ್ತಮೂಲೆ ಎಂಬಲ್ಲಿ ನಾರಾಯಣ ಎಂಬವರ ಮನೆಯ ಕಟ್ಟಿಹಾಕಿದ್ದ ನಾಯಿಯನ್ನು ಚಿರತೆ ಕೊಂದು ತಿಂದಿದೆ. ನಾಯಿಯ ತಲೆ ಮಾತ್ರ ಗೂಡು ಪರಿಸರದಲ್ಲಿ ಕಂಡು ಬರುತ್ತಿದೆ. ಸ್ಥಳಕ್ಕೆ ಅರಣ್ಯಪಾಲಕರು, ಸ್ಥಳೀಯರು ತಲುಪಿ ಪರಿಶೀಲಿಸಿದ್ದಾರೆ. ಶನಿವಾರ ರಾತ್ರಿ ಘಟನೆ ನಡೆದಿದೆ.
ರಾತ್ರಿ ಸತತವಾಗಿ ನಾಯಿ ಬೊಗಳಿದ್ದರೂ ಮನೆ ಮಂದಿ ಅಷ್ಟಾಗಿ ಗಮನಹರಿಸಿರಲಿಲ್ಲ. ಆದಿತ್ಯವಾರ ಬೆಳಿಗ್ಗೆ ನೋಡುವಾಗ ನಾಯಿಯ ತಲೆ ಭಾಗ ಮಾತ್ರ ಗೂಡಿನಿಂದ ಹೊರಗೆ ಕಂಡು ಬಂದಿದೆ. ಮುಳಿಯಾರು, ಬೇಡಡ್ಕ ಪಂಚಾಯತ್‌ಗಳಲ್ಲಿ ಭೀತಿ ಹುಟ್ಟಿಸುತ್ತಿದ್ದ ಚಿರತೆ ಇತ್ತೀಚೆಗೆ ಪಾಂಡಿಕಂಡಂನ ಲ್ಲಿರಿಸಿರುವ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿತ್ತು. ಈ ಚಿರತೆಯೇ ಇಲ್ಲಿಗೆ ತಲುಪಿರಬೇಕೆಂದು ಶಂಕಿಸಲಾಗಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಅರಣ್ಯಾಧಿಕಾರಿಗಳಾದ ಜಯಕುಮಾ ರನ್, ರವೀಂದ್ರ, ಗಾರ್ಡನ್‌ಗಳಾದ ಅಭಿಲಾಷ್, ಅರ್ಜುನ್ ಸ್ಥಳಕ್ಕೆ ತಲುಪಿ ಪರಿಶೀಲಿಸಿ ದ್ದಾರೆ. ಇದೇ ವೇಳೆ ಮಂಜಕ್ಕಲ್ ಪ್ರದೇಶದಲ್ಲಿ ಚಿರತೆ ಕಂಡು ಬಂದಿರುವುದು ಇದು ಪ್ರಥಮವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇತ್ತೀಚೆಗೆ ಬೋವಿಕ್ಕಾನದಲ್ಲಿ ಚಿರತೆ ಪ್ರತ್ಯಕ್ಷಗೊಂಡಿತ್ತು. ಮಂಜಕ್ಕಲ್ ಪರಿಸರದಲ್ಲಿ ಹಲವಾರು ಕಾಡುಕೋಣ ಗಳು ಸಂಚರಿಸುತ್ತಿದ್ದರೂ ಅವು ಆಕ್ರಮಣ ಕಾರಿಗಳಾಗಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಈಮಧ್ಯೆ ಚಿರತೆ ಪುಲ್ಲೂರು ಪೆರಿಯ ಪಂಚಾಯತ್‌ನಲ್ಲಿ ಮತ್ತೆ ಕಾಣಿಸಿಕೊಂಡಿದೆ. ಇಲ್ಲಿನ ತೊಡುಪ್ಪನಂ, ಕಲ್ಲುಮಾಳಂ ಪ್ರದೇಶಗಳಲ್ಲಿ ನಿನ್ನೆ ಬೆಳಿಗ್ಗೆ ಚಿರತೆ ಕಂಡುಬಂದಿದೆ. ಇಲ್ಲಿನ ಟಿ.ವಿ. ಕುಂಞಂಬು ಎಂಬವರು ಕೃಷಿಗೆ ನೀರುಣಿಸುವ ವೇಳೆ ಚಿರತೆ ನಡೆದುಕೊಂಡು ಹೋಗುವುದನ್ನು ಕಂಡಿದ್ದಾರೆನ್ನ ಲಾಗಿದೆ. ಕೂಡಲೇ ಮನೆಗೆ ತೆರಳಿ ಮೊಬೈಲ್‌ನಲ್ಲಿ ಇದರ ದೃಶ್ಯ ಚಿತ್ರೀಕರಿಸಲು ಯತ್ನಿಸಿದರೂ ಚಿರತೆ ಸಮೀಪದ ಗುಡ್ಡೆ ಹತ್ತ ಪರಾರಿಯಾಗಿದೆ. ಮಾಹಿತಿ ತಿಳಿದು ಪನತ್ತಡಿ ಸೆಕ್ಷನ್ ಫಾರೆಸ್ಟ್ ರೇಂಜ್ ಆಫೀಸರ್ ಶೇಶಪ್ಪರ ನೇತೃತ್ವದಲ್ಲಿ ವನಪಾಲಕರು ತಲುಪಿ ಪರಿಶೀಲಿಸಿ ದರು. ಇಲ್ಲಿಂದ ಹಲವಾರು ಹೆಜ್ಜೆ ಗುರುತುಗಳನ್ನು ಪತ್ತೆಹಚ್ಚಲಾಗಿದೆ. ಇದೇ ಸ್ಧಳದಲ್ಲಿ ಕ್ಯಾಮರಾ ಸ್ಥಾಪಿಸಲಾಯಿತು.