ಮಂಜೇಶ್ವರದಲ್ಲಿ ವಿದ್ಯುತ್ ಕಂಬಕ್ಕೆ ನೇಣುಬಿಗಿದು ಸಾವಿಗೀಡಾದ ವ್ಯಕ್ತಿ ತಿರುವನಂತಪುರ ನಿವಾಸಿ

ಮಂಜೇಶ್ವರ: ಮಂಜೇಶ್ವರ ರೈಲ್ವೇ ಹಳಿ ಸಮೀಪ ವಿದ್ಯುತ್ ಕಂಬಕ್ಕೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ತಿರುವನಂತಪುರ ನಿವಾಸಿ ಮೀನು ಕಾರ್ಮಿಕನಾದ ಕ್ಸೇವಿಯರ್ (೪೬) ಎಂಬವರೆಂದು ಗುರುತುಹಚ್ಚಲಾಗಿದೆ.

ಇತ್ತೀಚೆಗೆ ಇವರು ಮೀನುಗಾರಿಕೆಗೆಂದು ಬೋಟ್‌ನಲ್ಲಿ ಮುಂಬಯಿ ಭಾಗಕ್ಕೆ ತೆರಳಿದ್ದರು. ಅರ್ಧಕ್ಕೆ ತಲುಪಿದಾಗ ಕ್ಸೇವಿಯ ರ್‌ಗೆ ಅಸೌಖ್ಯವುಂ ಟಾಯಿತೆನ್ನ ಲಾಗಿದೆ. ಇದರಿಂದ ಜತೆಗಿದ್ದವರು ಬೇರೊಬ್ಬನ ಜೊತೆಗೆ ರತ್ನಗಿರಿಯಿಂದ ರೈಲು ಹತ್ತಿಸಿ ಮಂಗಳೂರಿಗೆ ಕಳುಹಿಸಿದ್ದರೆನ್ನಲಾಗಿದೆ. ಆದರೆ ಮಂಗಳೂರು ನಿಲ್ದಾಣದಲ್ಲಿಳಿದ ಬಳಿಕ ಕ್ಸೇವಿಯರ್ ನಾಪತ್ತೆಯಾಗಿರುವುದಾಗಿ  ಹೇಳಲಾಗುತ್ತಿದೆ. ಇದರಿಂದ ಜತೆಗಿದ್ದ ವ್ಯಕ್ತಿ ಮರಳಿದ್ದರು. ಅನಂತರ ಕ್ಸೇವಿಯರ್ ಬೇರೆ ರೈಲಿನಲ್ಲಿ ಬಂದು ಮಂಜೇಶ್ವರದಲ್ಲಿಳಿದು ವಿದ್ಯುತ್ ಕಂಬಕ್ಕೆ ನೇಣು ಬಿಗಿದು ಸಾವಿಗೀಡಾಗಿರಬಹುದೆಂದು ಅಂದಾಜಿಸಲಾಗಿದೆ.

ವ್ಯಕ್ತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಬಗ್ಗೆ ಪತ್ರಿಕೆಗಳಲ್ಲಿ ಬಂದ ವರದಿಯ ಆಧಾರದಲ್ಲಿ ತಿರುವನಂತಪುರದಿಂದ  ಸಂಬಂಧಿಕರು ಮಂಜೇಶ್ವರಕ್ಕೆ ತಲುಪಿದ್ದಾರೆ. ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರಿಸಿದ್ದ ಮೃತದೇಹವನ್ನು ಊರಿಗೆ ಕೊಂಡೊಯ್ದರು.

RELATED NEWS

You cannot copy contents of this page