ಮಂಜೇಶ್ವರ: ಓಣಂ ಸ್ಪೆಷಲ್ ಡ್ರೈವ್‌ನ ಅಂಗವಾಗಿ ಎಕ್ಸೈಸ್ ಚೆಕ್‌ಪೋಸ್ಟ್‌ನಲ್ಲಿ ನಡೆಸಿದ ತಪಾಸಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ೩೦೨ ಲೀಟರ್ ಮದ್ಯ ವಶಪಡಿಸಿದರು. ಪೆಟ್ಟಿಗೆಗಳಲ್ಲಿ ಹಾಕಿ ಸಾಗಿಸುತ್ತಿದ್ದ ೧೬೮೦ ಟೆಟ್ರಾ ಪ್ಯಾಕೆಟ್ ಮದ್ಯವನ್ನು ವಶಪಡಿಸಲಾಗಿದೆ. ಈ ಪ್ರಕರಣದಲ್ಲಿ ಪನಯಾಲ್ ದೇವನ್ ಪೊಡಿಚ್ಚಪಾರ ಬಂಗೋಟ್ ನಿವಾಸಿ ಭರತ್ ರಾಜ್ (೩೬)ನನ್ನು ಸೆರೆಹಿಡಿಯಲಾಗಿದೆ. ಓಣಂ ಹಬ್ಬದ ವೇಳೆಯ ವ್ಯಾಪಾರಕ್ಕಾಗಿ ಟ್ಯಾಕ್ಸಿ ಕಾರಿನಲ್ಲಿ ಮದ್ಯ ಸಾಗಿಸಲಾಗಿದೆ. ಇದಕ್ಕೂ ಮೊದಲು ಕಾರಿನಲ್ಲಿ ಸಾಗಿಸುತ್ತಿದ್ದ ೭೨ ಲೀಟರ್ ಮದ್ಯವನ್ನು ವಶಪಡಿಸಲಾಗಿತ್ತು. ಅಬಕಾರಿ ಇನ್‌ಸ್ಪೆಕ್ಟರ್ ಎಂ. ಯೂನುಸ್‌ರ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸಲಾಗಿತ್ತು. ಪ್ರಿವೆಂಟಿವ್ ಆಫೀಸರ್‌ಗಳಾದ ವಿ. ಸಜೀವ್, ಸಿವಿಲ್ ಎಕ್ಸೈಸ್ ಅಧಿಕಾರಿಗಳಾದ ಕೆ. ರಾಮ, ಕೆ. ದಿನೂಪ್, ಅಖಿಲೇಶ್, ವಿ.ಬಿ. ಸಬಿತಲಾಲ್, ಚಾಲಕ ಕೆ.ಇ. ಸತ್ಯನ್ ತಂಡದಲ್ಲಿದ್ದರು.

 
								 
															




