ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಚಾಲನೆ
ಉಪ್ಪಳ: ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವ ಮಂಗಲ್ಪಾಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರಂಭಗೊA ಡಿತು. ಉಮಾನ್ ಚೇಂಬರ್ ಆಫ್ ಕಾಮರ್ಸ್ ಇದರ ಸದಸ್ಯ ಅಬ್ದುಲ್ ಲತೀಫ್ ಉಪ್ಪಳ ಗೇಟ್ ಉದ್ಘಾಟಿಸಿ ದರು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು.. ಮಂಗಲ್ಪಾಡಿ ಪಂಚಾ ಯತ್ ಅಧ್ಯಕ್ಷೆ ರುಬಿನ ನೌಫಲ್, ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ರಹಮಾನ್, ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಹನೀಫ್ ಪಿ.ಕೆ, ಜಿಲ್ಲಾ ವಿದ್ಯಾಧಿಕಾರಿ ಮಧುಸೂದನನ್ ಟಿ.ವಿ, ಸದಾಶಿವ ಶೆಟ್ಟಿ ಕೂಳೂರು, ಶ್ರೀಕುಮಾರ್ ಎಂ ಎ, ಸಹಾಯಕ ಶಿಕ್ಷಣಾಧಿಕಾರಿ ರಾಜಗೋಪಾಲ ಕೆ. , ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಖೈರುನ್ನಿಸಾ ಮುಟ್ಟಂ, ಬ್ಲಾಕ್ ಪಂಚಾಯತ್ ಸದಸ್ಯ ರಾಧಾಕೃಷ್ಣ ಭಟ್, ಪಂಚಾಯತ್ ಸದಸ್ಯರಾದ ಮಜೀದ್ ಪಚ್ಚಂಬಳ, ವಿಜಯ ಕುಮಾರ್ ರೈ, , ಇಬ್ರಾಹಿಂ, ಅಬ್ದುಲ್ ರಹೀಮ್, ಸುಜಾತಾ ಶೆಟ್ಟಿ, ಬಾಬು, ಸುಧಾ, ಬಿಫಾತಿಮ್ಮ , ಗುಲ್ಸರ್ ಬಾನು, ರಹಮ್ಮತ್ ಬಿವಿ, ರಶಿದ ಹನಿಫ್ ,ಕಿಶೋರ್ ಕುಮಾರ್, ರೇವತಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ಉಪ್ಪಳ ಗೇಟ್, ನೌಶಾದ್ ಕೆ.ಪಿ ಶುಭ ಹಾರೈಸಿದರು. ಮಂಗಲ್ಪಾಡಿ ಶಾಲೆಯ ಪಾಂಶುಪಾ¯ ಶ್ರೀಕುಮಾರ್ ಎಂ.ಎ ಸ್ವಾಗತಿಸಿ, ಹಸೀನ ಎನ್.ಎ ವಂದಿಸಿ ದರು. ಅಶ್ರಫ್.ಸಿ ನಿರೂಪಿಸಿದರು.