ಮಂಜೇಶ್ವರ ಏರಿಯಾ ರೈತ ಸಂಘದ ಸಮಾವೇಶ
ಮಂಜೇಶ್ವರ: ಮಂಜೇಶ್ವರ ಏರಿಯಾ ರೈತ ಸಂಘದ ಸಮಾವೇಶ ನಿನ್ನೆ ಹೊಸಗಂಡಿ ಎ.ಕೆ.ಜಿ ಮಂದಿರದಲ್ಲಿ ಜರಗಿತು. ಅಡಿಕೆ ಕೃಷಿಗೆ ಮಹಾಳಿ ರೋಗ ಬಂದಿರುವುದಕ್ಕೆ ಕೃಷಿಕರಿಗೆ ಪರಿಹಾರ ಒದಗಿಸಲು ಸರಕಾರವನ್ನು ಒತ್ತಾಯಿಸಲಾಯಿತು. ಗೀತಾಸಾಮಾನಿ ಅಧ್ಯಕ್ಷತೆ ವಹಿಸಿದ್ದು, ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಕೆ. ಆರ್. ಜಯಾನಂದ ಉದ್ಘಾಟಿಸಿದರು. ಕಾರ್ಯದರ್ಶಿ ಅಶೋಕ ಭಂಡಾರಿ ಸ್ವಾಗತಿಸಿ, ಚಂದ್ರಹಾಸ ಶೆಟ್ಟಿ, ಕೆ. ಕಮಲಾಕ್ಷ ಮಾತನಾಡಿದರು.